Saturday, June 6, 2026
Homeರಾಜಕೀಯಅಪ್ಪಾಜಿ ನಾಡಗೌಡ ಅವರಿಗೆ ಸಚಿವ ಸ್ಥಾನ ನೀಡಿ: ಭರವಸೆಯನ್ನು ಉಳಿಸಿಕೊಳ್ಳಿ...!!!

ಅಪ್ಪಾಜಿ ನಾಡಗೌಡ ಅವರಿಗೆ ಸಚಿವ ಸ್ಥಾನ ನೀಡಿ: ಭರವಸೆಯನ್ನು ಉಳಿಸಿಕೊಳ್ಳಿ…!!!

ವಿಜಯಪುರ(ಮುದ್ದೇಬಿಹಾಳ):

ಸತತ ೪ ಬಾರಿ ಸೇರಿದಂತೆ ಒಟ್ಟೂ ೬ ಬಾರಿ ಶಾಸಕ, ಶಾಸಕರಾಗಿ ಪ್ರಥಮ ಆಯ್ಕೆಯಲ್ಲಿಯೇ ಕಾರ್ಮಿಕ ಸಚಿವ, ರಾಜ್ಯ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಮೈಸೂರ ಸ್ಯಾಡಲ್‌ ಸೋಪ್‌ ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸ್ಥಾನಗಳನ್ನು ನಿಭಾಯಿಸಿ ಅವುಗಳಿಂದ ರಾಜ್ಯ ಸರಕಾರಕ್ಕೆ ಹೆಚ್ಚಿನ ಆದಾಯ ಜೊತೆಗೆ ಕಾಂಗ್ರೇಸ್‌ ಪಕ್ಷ ಸಂಘಟಿಸುವಲ್ಲಿಯೂ ನಿಸ್ಸಮರಾದ ಸಿ.ಎಸ್.ನಾಡಗೌಡ ಅಪ್ಪಾಜಿ ಅವರಿಗೆ ಸಚಿವ ಸ್ಥಾನವನ್ನು ನೀಡುವುದು ಅವಶ್ಯಕವಾಗಿದೆ.

ಹೌದು, ಸದ್ಯಕ್ಕೆ ಕರ್ನಾಟಕ ರಾಜ್ಯದಲ್ಲಿ ಡಿ.ಕೆ.ಶಿವಕುಮಾರ ಸಾರಥ್ಯದಲ್ಲಿ ಸರಕಾರ ನಡೆಯುತ್ತಿದ್ದು ರಾಜ್ಯ ಸರಕಾರದ ಸಂಪುಟ ಸಚಿವ ಸ್ಥಾನಕ್ಕಾಗಿ ಭಾರಿ ಲಾಭಿ ನಡೆಯುತ್ತಿದೆ. ಮುಖ್ಯಮಂತ್ರಿಯಾಗಿ ಡಿಕೆ ಅವರು ಪ್ರಮಾಣ ವಚನ ಸ್ವೀಕಾರಕ್ಕೂ ಮೊದಲೇ ಸಾಕಷ್ಟು ಶಾಸಕರುಗಳ ಹೆಸರು ಸಚಿವ ಸ್ಥಾನಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಆದರೆ ಅವೆಲ್ಲದಕ್ಕೂ ವಿರೋಧವಾಗುವಂತೆ ಕಾಂಗ್ರೇಸ್‌ ಹೈಕಮಾಂಡ ಸಾಕಷ್ಟು ಶಾಸಕರಿಗೆ ನಿರಾಶೆ ಉಂಟು ಮಾಡುವಂತಹ ಸಚಿವರ ಹೆಸರುಗಳನ್ನು ಬಹಿರಂಗಪಡಿಸಿದ್ದು ಕೆಲವರಲ್ಲಿ ಆಕ್ರೋಶ ವ್ಯಕ್ತವಾದಂತಾಗಿದೆ.

ಎಂದಿಗೂ ಪಕ್ಷ ವಿರೋಧ ಚಟುವಟಿಕೆಯಲ್ಲಿ ಭಾಗಿಯಾಗದ ಅಪ್ಪಾಜಿ ನಾಡಗೌಡ:

ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ೬ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಿ.ಎಸ್.ನಾಡಗೌಡ ಅಪ್ಪಾಜಿ ಅವರಿಗೆ ಸಚಿವ ಸ್ಥಾನಗಳ ಪ್ರಥಮ ಪಟ್ಟಿಯಲ್ಲಯೇ ಹೆಸರು ಸಾಕಷ್ಟು ಬಾರಿ ಬಂದು ಕೊನೆಯ ಹಂತದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದರೂ ಯಾವುದೇ ರೀತಯಿ ನಿರಾಶೆಯನ್ನು ವ್ಯಕ್ತಪಡಿಸದ ಅವರು ಕಾಂಗ್ರೇಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡವರು. ಆದರೆ ಎಂದಿಗೂ ಕಾಂಗ್ರೇಸ್‌ ಪಕ್ಷದ ವಿರೋಧ ಚಟುವಟಿಕೆಯಲ್ಲಿ ಭಾಗಿಯಾದ ಉದಾಹರಣೆ ಇಲ್ಲ.

ಕ್ಷೇತ್ರದಲ್ಲಿ ಕಾಂಗ್ರೇಸ್‌ ಉಳಿವಿಗಾಗಿ ಸಚಿವ ಸ್ಥಾನ ನೀಡಬೇಕು:

ಮುದ್ದೇಬಿಹಾಳ ಕ್ಷೇತ್ರದಲ್ಲಿ ಕಾಂಗ್ರೇಸ್‌ ಪಕ್ಷವನ್ನು ಸಂಘಟಿಸಿ ಅಧಿಕಾರದ ಚುಕ್ಕಾಣಿ ಕೊಡಿಸುವಲ್ಲಿ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಯಶಸ್ವಿಯಾಗಿದ್ದಾರೆ. ಕ್ಷೇತ್ರದಲ್ಲಿ ಕೆಲ ಬಾರಿ ಜೆಡಿಎಸ್‌ ಪಕ್ಷದಿಂದ ದೇಶಮುಖ ಅವರು ಶಾಸಕರಾಗಿ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಆಯ್ಕೆಯಾಗಿದ್ದು ಬಿಟ್ಟರೆ ಉಳಿದೆಲ್ಲ ಚುನಾವಣೆಯಲ್ಲಿಯೂ ಕಾಂಗ್ರೇಶ್‌ ಪಕ್ಷಕ್ಕೆ ಚುಕ್ಕಾಣಿ ಹಿಡಿಯುವಂತೆ ನೋಡಿಕೊಂಡ ಜವಾಬ್ದಾರಿ ನಾಡಗೌಡ ಅವರು ನಿಭಾಯಿಸಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಅಬ್ಬರದಿಂದ ಹಾಗೂ ಹಿಂದೆ ದೇ.ಹಿಪ್ಪರಗಿ ಕಾಂಗ್ರೇಸ್‌ ಶಾಸಕರಾಗಿದ್ದ ಎ.ಎಸ್.ಪಾಟೀಲ ನಡಹಳ್ಳಿ ಅವರು ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿ ಸಿ.ಎಸ್.ನಾಡಗೌಡ ಅಪ್ಪಾಜಿ ಅವರನ್ನು ಪರಾಜಿತರನ್ನಾಗಿ ಮಾಡಲಾಗಿತ್ತು. ಆದರೆ ಇದಕ್ಕೆ ಜಗ್ಗದ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಕ್ಷೇತ್ರದಲ್ಲಿ ಈ ಹಿಂದೆ ದೇಶಮುಖ ಅವರ ವಿರುದ್ಧ ಸೋಲು ಅನುಭವಿಸಿದಾಗಲೂ ಮಾಡಿದಂತೆ ಮತ್ತೇ ಕಾಂಗ್ರೇಸ್‌ ಪಕ್ಷವನ್ನು ಸಂಘಟಿಸಿ 2024ರ ವಿಧಾನಸಭಾ ಚುನಾವಣೆಯಲ್ಲಿ ಸವಾಲು ಹಾಕುವ ಮೂಲಕ ಮತ್ತೇ ಶಾಸಕರಾಗಿ ಆಯ್ಕೆಯಾದ್ದು ಇತಿಹಾಸವಾಗಿದೆ.

ತಪ್ಪಿದ ಮಾತನ್ನು ಉಳಿಸಿಕೊಳ್ಳಿ ಸಿದ್ರಾಮಯ್ಯನವರೇ….!!!

2024ರ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆಯಲ್ಲಿ ಮುದ್ದೇಬಿಹಾಳ ಕ್ಷೇತ್ರಕ್ಕೆ ಆಗಮಿಸಿದ್ದ ಸಿದ್ರಾಮಯ್ಯನವರು ಬಹಿರಂಗ ಸಭೆಯಲ್ಲಿ ʼನೀವು ನಾಡಗೌಡ ಅಪ್ಪಾಜಿ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿ, ನಾನು ಅವರನ್ನು ಸಚಿವರನ್ನಾಗಿ ಆಯ್ಕೆ ಮಾಡುತ್ತೇನೆʼ ಎಂದು ಇಲ್ಲಿನ ಕಾಂಗ್ರೇಸ್‌ ಕಾರ್ಯಕರ್ತರಿಗೆ ಭರವಸೆಯನ್ನು ನೀಡಿದ್ದರು. ಆದರೆ ಸಿದ್ರಾಮಯ್ಯನವರು ಸಿಎಂ ಆದಾಗ ನಾಡಗೌಡ ಅವರಿಗೆ ಸಚಿವ ಸ್ಥಾನದ ಬದಲಿಗೆ ನಿಗಮ ಮಂಡಲಿ ಅಧ್ಯಕ್ಷ ಸ್ಥಾನವನ್ನು ನೀಡಿ ಮುಂದೆ ಸಂಪುಟ ವಿಸ್ತರಣೆಯಲ್ಲಿ ಸಚಿವರನ್ನಾಗಿಸುವ ಭರವಸೆ ನೀಡಿದ್ದರು. ಆದರೆ ಸದ್ಯಕ್ಕೆ ಸಿಎಂ ಸ್ಥಾನವನ್ನು ಪಕ್ಷದ ಹೈಕಮಾಂಡ್‌ ನಿರ್ಧೇಶನದಂತೆ ಡಿ.ಕೆ.ಶಿವಕುಮಾರ ಅವರಿಗೆ ಹಸ್ತಾಂತರಿಸಿದ್ದು ರಾಜ್ಯ ಸರಕಾರದ ಎರಡನೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತಿದೆ. ಈಗಾಗಲೇ ೧೩ ಸಚಿವರ ಆಯ್ಕೆಯಾಗಿದ್ದು ಇನ್ನೂಳಿದ ಸಚಿವ ಸ್ಥಾನಗಳಲ್ಲಿ ಸಿ.ಎಸ್.ನಾಡಗೌಡ ಅಪ್ಪಾಜಿ ಅವರಿಗೆ ಸಚಿವ ಸ್ಥಾನ ನೀಡಲೇ ಬೇಕು ಎನ್ನುವುದು ಮತಕ್ಷೇತ್ರದ ಕಾಂಗ್ರೇಸ್‌ ಕಾರ್ಯಕರ್ತರ ಬೇಡಿಕೆಯಾಗಿದೆ.

ಪಕ್ಷದ ನಿಷ್ಠಾವಂತ ಸಿ.ಎಸ್.ನಾಡಗೌಡ:

ಇತ್ತಿಚಿಗಷ್ಟೇ ಬಾಗಲಕೋಟೆ ಉಪ ಚುನಾವಣೆಯು ಕಾಂಗ್ರೇಸ್‌ ಪಕ್ಷಕ್ಕೆ ಬಾರಿ ಸವಾಲು ಎನ್ನುವ ರೀತಿಯಲ್ಲಿ ಮಾರ್ಪಟ್ಟಿತ್ತು. ಈ ಕ್ಷೇತ್ರದ ಚುನಾವಣೆಗಾಗಿ ರಾಜ್ಯದ ಘಟಾನುಘಟಿಗಳು ಪ್ರಚಾರಕ್ಕೆ ಆಗಮಿಸಿ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಿದ್ದರು. ಅದರಂತೆ ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರಿಗೂ ಒಂದು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಪ್ರಚಾರಕರಾಗಿ ಕಾಂಗ್ರೇಸ್‌ ಹೈಕಮಾಂಡ ನೇಮಿಸಲಾಗಿತ್ತು. ಈ ವೇಳೆಯಲ್ಲಿ ತಮ್ಮ ವ್ಯಾಪ್ತಿಯ ಕ್ಷೇತ್ರದಲ್ಲಿ ಕಾಂಗ್ರೇಸ್‌ ಪಕ್ಷಕ್ಕೆ ಅತೀ ಹೆಚ್ಚು ಮತಗಳನ್ನು ತಂದುಕೊಡಬೇಕು ಎನ್ನುವ ಉದ್ದೇಶದಿಂದ ನಾಡಗೌಡ ಅವರು ತಮ್ಮ ಕುಟುಂಬ ಸಮೇತ ಕಾರ್ಯಕರ್ತರನ್ನು ಆ ಕ್ಷೇತ್ರದಲ್ಲಿಯೇ ಬೀಡು ಬಿಟ್ಟು ಪ್ರಚಾರದಲ್ಲಿ ತೊಡಗಿ ಕಾಂಗ್ರೇಸ್‌ ಅಭ್ಯರ್ಥಿ ಉಮೇಶ ಮೇಟಿ ಅವರ ಗೆಲುವಿಗೆ ಕಾರಣಿಭೂತರಾಗಿ ಪಕ್ಷದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಯಶಸ್ವಿಯಾದರು.

“ರಾಜ್ಯ ಸರಕಾರದಲ್ಲಿ ಸಚಿವ ಸಂಪುಟ ರಚನೆಯಲ್ಲಿ ತೊಡಗಿದ್ದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರಿಗೂ ಸಚಿವ ಸ್ಥಾನ ನೀಡಬೇಕಿದೆ. ಇದರಿಂದ ವಿಜಯಪುರ ಜಿಲ್ಲೆಯಲ್ಲಿ ಕೇವಲ ಬ.ಬಾಗೇವಾಡಿ, ಬಬಲೇಶ್ವರ ಹಾಗೂ ಇಂಡಿ ಕ್ಷೇತ್ರಗಳಿಗೆ ಸೀಮಿತವಾಗಿರುವ ಸಚಿವ ಸ್ಥಾನವನ್ನು ಮುದ್ದೇಬಿಹಾಳಕ್ಕೂ ಲಭಿಸುತ್ತದೆ ಎಂಬ ಭರವಸೆ ಮುದ್ದೇಬಿಹಾಳ ಕ್ಷೇತ್ರದ ಕಾಂಗ್ರೇಸ್‌ ಕಾರ್ಯಕರ್ತರಲ್ಲಿ ಮೂಡುವಂತಾಗುತ್ತದೆ. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಮುದ್ದೇಬಿಹಾಳ ಕ್ಷೇತ್ರದಲ್ಲಿ ಕಾಂಗ್ರೇಸ್‌ ಪಕ್ಷದ ಯಾವುದೇ ಭರವಸೆಗೆ ಮತದಾರರು ಸಿದ್ದರಾಗಿರುವುದಿಲ್ಲ ಎಂಬುವುದು ಮನವರಿಕೆ ಮಾಡಿಕೊಳ್ಳಬೇಕಾಗುತ್ತದೆ.”

– ಶ್ರೀಮತಿ ಅಕ್ಷತಾ ಶರಣಬಸು ಚಲವಾದಿ, ತಾಲೂಕಾಧ್ಯಕ್ಷರು, ಬ್ಲಾಕ್‌ ಕಾಂಗ್ರೇಸ್‌ ಮಹಿಳಾ ಘಟಕ, ಮುದ್ಧೇಬಿಹಾಳ.

ಹೆಚ್ಚಿನ ಸುದ್ದಿ