ಮುದ್ದೇಬಿಹಾಳ:
ಜಾಗತಿಕ ತಾಪಮಾನ ಏರಿಕೆ ತಗ್ಗಿಸಳು ನಮ್ಮ ದೇಶದಲ್ಲಿ ೧೯೫೦ ರಲ್ಲಿ ಅಂದಿನ ಕೃಷಿ ಸಚಿವರಾಗಿದ್ದ ಕೆ.ಎಂ. ಮುನ್ಷಿ ಅವರು ಪ್ರತಿ ವರ್ಷ ಜುಲೈ ೧ ರಿಂದ ಜುಲೈ ೭ ರವರೆಗೆ ಪರಿಸರ ಸಂರಕ್ಷಣೆ ಮತ್ತು ಅರಣ್ಯ ನಾಶ ತಡೆಯುವ ಉದ್ದೇಶದಿಂದ ವನಮಹೋತ್ಸವ ಆಚರಣೆಯನ್ನು ಆರಂಭಿಸಿದರು ಎಂದು ಪ್ರಾರ್ಥನಾ ವಿದ್ಯಾ ಮಂದಿರ ಶಾಲಾ ಮುಖ್ಯಗುರುಮಾತೆ ದಿವ್ಯಾ ಹೆಬ್ಬಾರ ಹೇಳಿದರು.
ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ಬಸವ ವಿದ್ಯಾ ಪ್ರಸಾರಕ ಸಂಸ್ಥೆಯ ಪ್ರಾರ್ಥನಾ ವಿದ್ಯಾ ಮಂದಿರ ಶಾಲೆಯಲ್ಲಿ ಶುಕ್ರವಾರ ಅಂತರಾಷ್ಟ್ರೀಯ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ನಮ್ಮ ಪರಿಸರ ಸಂರಕ್ಷಣೆ ಬಗ್ಗೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವುದು ಎಲ್ಲರ ಕರ್ತವ್ಯವಾಗಿದೆ. ಇದರ ಬಗ್ಗೆ ನಾವೆಲ್ಲರೂ ಹೆಚ್ಚಿನ ಜಾಗೃತಿ ಮೂಡಿಸುವುದು ಅವಶ್ಯಕತೆ ಇದೆ ಎಂದು ಹೇಳಿದರು.

ಇದೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ವೇಷಧರಿಸಿ ಗಮನ ಸೆಳೆದರು. ವನಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಚದ್ಮವೇಶ ಮತ್ತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು ಮತ್ತು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾವದಗಿ, ಪ್ರಭುರಾಜ ಕಲಬುರ್ಗಿ, ಮುಖ್ಯ ಗುರುಗಳಾದ ವಿನೋದ ಪಟಗಾರ, ಶಿಕ್ಷಕರಾದ ಪರಶುರಾಮ ರತ್ನಾಕರ್, ರಾಮನಗೌಡ ಪಾಟೀಲ್, ಪ್ರಭು ತುರಡಗಿ, ರವಿ ಭೋವಿ ಮತ್ತು ಶಿಕ್ಷಕಿಯರಾದ ಗೀತಾ ಉಗ್ಗನ್ನವರ, ತ್ರಿವೇಣಿ ರಾಠೋಡ್, ಶಾರದಾ ಗೌಡ, ಸಮರಿನ್ ದೇಸಾಯಿ, ಸುಗ್ಲಾ ಕಂಠಿ, ಸನ್ಮತಿ ಶೆಟ್ಟಿ, ಅಶ್ವಿನಿ ವಾಯ್, ಅಂಜುಮ್ ಮಮದಾಪುರ, ನೀಲಮ್ಮ ಧೋಲೆ, ಆಶಾ ಪಾಟೀಲ್ ಇದ್ದರು.
ಕಾರ್ಯಕ್ರಮವನ್ನು ಶಿಕ್ಷಕಿ ರೂಪರಾಣಿ ಪಟಗಾರ ಸ್ವಾಗತಿಸಿದರು, ಚಾರು ನಿರೂಪಿಸುದರು, ಅಂಜನಾ ಬಸರಕೋಡ ವಂದಿಸಿದರು.
