Tuesday, May 12, 2026
Homeಜಿಲ್ಲಾ ಸುದ್ದಿಗಳುಪೃಥ್ವಿರಾಜ ನಾಡಗೌಡ ನೇತೃತ್ವದಲ್ಲಿ ಲಲಿತಾ ಗೋರಬಾಳ ಪ.ಪಂ. ಅಧ್ಯಕ್ಷೆಯಾಗಿ ಅವಿರೋಧ ಆಯ್ಕೆ....!!!

ಪೃಥ್ವಿರಾಜ ನಾಡಗೌಡ ನೇತೃತ್ವದಲ್ಲಿ ಲಲಿತಾ ಗೋರಬಾಳ ಪ.ಪಂ. ಅಧ್ಯಕ್ಷೆಯಾಗಿ ಅವಿರೋಧ ಆಯ್ಕೆ….!!!

ಮುದ್ದೇಬಿಹಳ(ನಾಲತವಾಡ:
ತಾಲೂಕಿನ ನಾಲತವಾಡ ಪಟ್ಟಣ ಪಂಚಾಯತಿ ಸಾಮಾನ್ಯ ಮಹಿಳೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಲಲಿತಾ ಮುತ್ತುಗೌಡ ಗೋರಬಾಳ ಮಂಗಳವಾರ ನಡೆದ ಚುನಾವಣೆಯಲ್ಲಿ ಅವೀರೋಧವಾಗಿ ಆಯ್ಕೆಯಾದರು.
ಕಳೆದ 15 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ವಿಜಯಲಕ್ಷಿ ಇಲಕಲ್ ಅವರು ಅಧಿಕಾರ ಅವಧಿ ಮುಕ್ಯಾಯಗೊಂಡ ಬಳಿಕೆ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದರು. ನಂತರ 14 ಸದಸ್ಯರ ಬಲ ಹೊಂದಿದ ಪ.ಪಂ.ಯ ಮಹಿಳಾ ಮೀಸಲಾಯಿತಿಗೆ ಒಟ್ಟೂ 4 ಮಹಿಳಾ ಸದಸ್ಯರಿದ್ದರೂ ಪೃಥ್ವರಾಜ ನಾಡಗೌಡ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಲಲಿತಾ ಗೋರಬಾಳ ಅವರು ಹೊರತು ಪಡಿಸಿ ಇನ್ನಳಿದ ಮೂರು ಮಹಿಳಾ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಕಾರಣ ಲಲಿತಾ ಅವರು ಅವಿರೋಧವಗಿ ಆಯ್ಕೆಯಾದರು.
ಮುಂದುವರೆದ ಹಂಗಾಮಿ ಉಪಾಧ್ಯಕ್ಷ ಸ್ಥಾನ:
ಇತ್ತಿಚಿಗಷ್ಟೇ ಪ.ಪಂ.ಗೆ ಹಂಗಾಮಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಬಸವರಾಜ ಗಂಗನಗೌಡ ಅವರು ಪ.ಪಂ. ಉಪಾಧ್ಯಕ್ಷರಾಗಿ ಮುಂದುವರೆದಿದ್ದಾರೆ.
ಸ0ಭ್ರಮಾಚರಣೆ:
ಪ.ಪಂ ಅಧ್ಯಕ್ಷರಾಗಿ ಲಲಿತಾ ಗೋರಬಾಳ ಅವರು ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಪಂಚಾಯತಿಯ ಎದುರಿಗೆ ಅಭಿಮಾನಿಗಳು ಸಿಹಿ ಹಂಚಿ ಪಟಾಕಿ ಸಿಡಿಸಿ ಪೃಥ್ವರಾಜ ನಾಡಗೌಡ ಹಾಗೂ ಶಾಸಕ ಸಿ.ಎಸ್.ನಾಡಗೌಡ ಅವರಿಗೆ ಜೈಕಾರ ಹಾಕಿ ಸಂಭ್ರಮಾಚರಣೆಯನ್ನು ಮಾಡಿದರು.
ಚುನಾಚಣಾಧಿಕಾರಿಯಾಗಿದ್ದ ನಿಡಗುಂದಿಯ ತಹಸೀಲ್ದಾರ ಎ.ಡಿ.ಅಮರಾವದಗಿ ನೂತನವಾಗಿ ಆಯ್ಕೆಯಾದ

ಅಧ್ಯಕ್ಷರಿಗೆ ಸನ್ಮಾನಿಸಿ ಶುಭಕೋರಿದರು.
ಈ ಸಂದರ್ಭದಲ್ಲಿ ಪ.ಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪೃಥ್ವಿರಾಜ್ ನಾಡಗೌಡ, ಮಾಜಿ ಅಧ್ಯಕ್ಷೆ ವಿಜಯಲಕ್ಷಿ ಇಲಕಲ್, ಉಪಾಧ್ಯಕ್ಷರಾದ ಬಸವರಾಜ ಗಂಗನಗೌಡ್ರ, ಸದಸ್ಯರಾದ ಜಗದೀಶ ಡೇರೇದ, ಡಾ.ಎಸ್.ಬಿ.ಗಂಗನಗೌಡ್ರ, ಅಮರಪ್ಪ ಬಾರಡ್ಡಿ, ಬಾಬು ಕ್ಷತ್ರಿ, ರಮೇಶ ಆಲಕೊಪ್ಪರ, ಶಿವಪುತ್ರಪ್ಪ ಗುರಿಕಾರ, ಅಮರಪ್ಪ ಸೀರಿ, ಬಸೀರಾಬೇಗಂ ಮೂಲಿಮನಿ, ಯಮನವ್ವ ಗೌಂಡಿ, ರಾಜಬಿ ನಾಡದಾಳ ನೀಲಪ್ಪ ಸಿದ್ದಾಪೂರ, ರುದ್ರಗಂಟಿ, ಪ.ಪಂ ಸಿಓ ಈರಣ್ಣ ಕೊಣ್ಣೂರ, ಮುತ್ತುಗೌಡ ಗೊರಬಾಳ, ವಿದ್ಯಾ ಗೊರಬಾಳ ಹಾಗೂ ಚುನಾವಣಾ ಸಿಬ್ಬಂದಿಗಳಾದ ಉಪ ತಹಶೀಲ್ದಾರ ನಿಂಗಪ್ಪ ದೊರೆ, ಕಂದಾಯ ನಿರೀಕ್ಷಕರಾದ ವೆಂಕಟೇಶ ಅಂಭಿಗೇರ, ಗ್ರಾಮ ಆಡಳಿತಾಧಿಕಾರಿಗಳಾದ ಸಚಿನ್ ಗೌಡರ, ಮಹೇಶ ಪಾಟೀಲ, ರವಿ ಮಡಿವಾಳರ, ಕಾರ್ತಿಕ ಪತ್ತಾರ, ಮುತ್ತಣ್ಣ ತಳವಾರ ಹಾಗೂ ಮೈಬೂಬ ನಾಡದಾಳ ಇದ್ದರು.
ಪೋಲಿಸ್ ಬಂದೋಬಸ್ತ: ಚುನಾವಣಾ ವೇಳೆ ಮುಂಜಾಗೃತ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಪೋಲೀಸ್ ಅಧಿಕಾರಿಗಳಾದ ಎ.ವೈ.ಸಾಲಿ, ಪುಂಡಲಿಕ ಲಮಾಣಿ, ಶಾಂತಗೌಡ ಬನ್ನಟ್ಟಿ, ಎಚ್.ಹೆಬ್ಬುಲಿ, ಬಸವರಾಜ ಹಿಪ್ಪರಗಿ, ಬಸವರಾಜ ಚಿಂಚೋಳ್ಳಿ ಸೇರಿದಂತೆ ಬಿಗಿ ಬಂದೋಬಸ್ತ ಒದಗಿಸಿದ್ದರು.

ಹೆಚ್ಚಿನ ಸುದ್ದಿ