Thursday, April 30, 2026
Homeರಾಜ್ಯಬಿಸಿಲಿನ ತಾಪಕ್ಕೆ ಅಸ್ವಸ್ಥನಾಗಿದ್ದ 8 ನೇ ತರಗತಿ ವಿದ್ಯಾರ್ಥಿ ಸಾವು..!!!ಬಿಸಿಲಿನ ಬಗ್ಗೆ ಜನಜಾಗೃತಿ ಮಾಡಬೇಕಾಗಿದೆ ತಾಲೂಕಾ...

ಬಿಸಿಲಿನ ತಾಪಕ್ಕೆ ಅಸ್ವಸ್ಥನಾಗಿದ್ದ 8 ನೇ ತರಗತಿ ವಿದ್ಯಾರ್ಥಿ ಸಾವು..!!!ಬಿಸಿಲಿನ ಬಗ್ಗೆ ಜನಜಾಗೃತಿ ಮಾಡಬೇಕಾಗಿದೆ ತಾಲೂಕಾ ಆರೋಗ್ಯ ಇಲಾಖೆ…!

ಮುದ್ದೇಬಿಹಾಳ:

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಬಿಸಿಲಿನಲ್ಲಿ ಆಟವಾಡಿದ 8ನೇ ತರಗತಿ ಬಾಲಕನೊಬ್ಬ ತೀವ್ರ ಶಾಖಕ್ಕೆ ತುತ್ತಾಗಿ ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.ಗ್ರಾಮದ ಶ್ರೀಶೈಲ ಬಸವಂತಪ್ಪ ಬಿರಾದಾರ (15) ಮೃತ ಬಾಲಕ.

ಇಂಗಳಗಿ-ಟಕ್ಕಳಕಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ.ವಿದ್ಯಾರ್ಥಿ ಶ್ರೀಶೈಲ ಖೋಖೋ, ಕಬಡ್ಡಿ ಕ್ರೀಡೆಗಳಲ್ಲಿ ಚುರುಕಾಗಿದ್ದ ಅಲ್ಲದೇ ಹೋಬಳಿ ಮತ್ತು ತಾಲೂಕು ಮಟ್ಟದ ಕಬಡ್ಡಿಯಲ್ಲಿ ಉತ್ತಮ ಆಟ ಗಾರನಾಗಿ ಹೊರಹೊಮ್ಮಿದ್ದ.ಬೇಸಿಗೆ ರಜೆ ಹಿನ್ನೆಲೆಯಲ್ಲಿ ಬಿಸಿಲಿ ನಲ್ಲಿ ಆಟವಾಡಿದ್ದರಿಂದ ಅನಾರೋಗ್ಯಕ್ಕೀಡಾಗಿದ್ದ ಅತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಜನರಲ್ಲಿ ಜಾಗೃತಿಗೋಲಿಸಬೇಕಿದೆ ತಾಲೂಕಾ ಆರೋಗ್ಯ ಇಲಾಖೆ:ಉರಿ ಬಿಸಿಲಿನಲ್ಲಿ ಜನರ ಆರೋಗ್ಯ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆಯಿಂದ ಜನಜಾಗೃತಿ ಮಾಡುವುದು ಅವಶ್ಯಕತೆ ಇದೆ. ಆದರೆ ಆರೋಗ್ಯ ಇಲಾಖೆಯಿಂದ ಇಂತಹ ಕಾರ್ಯಕ್ರಮವಗುತ್ತಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ.

“ತಾಲೂಕಿನಲ್ಲಿ ಬಿಸಿಲಿನಿಂದ ಬಾಲಕ ಸಾವಿಗೀಡಾದ ಘಟನೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲಾ. ಬಾಲಕ ನಮ್ಮ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ನಮಗೆ ಮಾಹಿತಿ ಬರುತ್ತಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಇದರ ಬಗ್ಗೆ ನಮಗೆ ಮಾಹಿತಿ ಇಲ್ಲ. ಈಗಾಗಲೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು ಅವರಿಂದ ಬಾಲಕನ ಸಾವಿನ ಬಗ್ಗೆ ಮಾಹಿತಿ ದೊರೆಯುತ್ತದೆ.”

-ಡಾ.ಸತೀಶ ತಿವಾರಿ, ತಾಲೂಕಾ ಆರೋಗ್ಯಾಧಿಕಾರಿಗಳು, ಮುದ್ದೇಬಿಹಾಳ.

ಹೆಚ್ಚಿನ ಸುದ್ದಿ