Tuesday, October 7, 2025
Homeವೈರಲ್ ಸುದ್ದಿಲಿವರ್, ಕಿಡ್ನಿಗಳನ್ನು ನ್ಯಾಚುರಲ್ ಆಗಿ ಡಿಟಾಕ್ಸ್ ಮಾಡಲು ಈ 5 ಹಣ್ಣುಗಳನ್ನು ನಿತ್ಯ ಸೇವಿಸಿ

ಲಿವರ್, ಕಿಡ್ನಿಗಳನ್ನು ನ್ಯಾಚುರಲ್ ಆಗಿ ಡಿಟಾಕ್ಸ್ ಮಾಡಲು ಈ 5 ಹಣ್ಣುಗಳನ್ನು ನಿತ್ಯ ಸೇವಿಸಿ

ಪ್ರತಿ ಕ್ಷಣವೂ ದೇಹವನ್ನು ನಿರ್ವಿಷಗೊಳಿಸಲು ಮೂಕ ಕೆಲಸಗಾರರಂತೆ ದುಡಿಯುವ ಅಂಗಗಳೆಂದರೆ ಲಿವರ್ (ಯಕೃತ್) ಮತ್ತು ಮೂತ್ರಪಿಂಡಗಳು (ಕಿಡ್ನಿ). ಕೆಲವು ಹಣ್ಣುಗಳ ಸಹಾಯದಿಂದ ಲಿವರ್ ಮತ್ತು ಕಿಡ್ನಿಗಳನ್ನು ನ್ಯಾಚುರಲ್ ಆಗಿ ಡಿಟಾಕ್ಸ್ ಮಾಡಬಹುದು. ಅಂತಹ ಐದು ಹಣ್ಣುಗಳೆಂದರೆ…

ಜಾಮೂನ್ ಅಥವಾ ನೇರಳೆ ಹಣ್ಣುಗಳು ಉತ್ಕರ್ಷಣ ನಿರೋಧಕಗಳಲ್ಲಿ ಅಧಿಕವಾಗಿದ್ದು ಇವು ಕಿಡ್ನಿಗಳ ಮೇಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಇದು ಒಟ್ಟಾರೆ ಚಯಾಪಚಯವನ್ನು ಹೆಚ್ಚಿಸುವುದರಿಂದ ಪರೋಕ್ಷವಾಗಿ ಲಿವರ್ ಆರೋಗ್ಯಕ್ಕೂ ಕೊಡುಗೆ ನೀಡುತ್ತದೆ.

ಉತ್ಕರ್ಷಣ ನಿರೋಧಕಗಳು, ವಿಶೇಷವಾಗಿ ಪ್ಯೂನಿಕಾಲಾಜಿನ್, ಉರಿಯೂತವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ ಆಗಿರುವ ದಾಳಿಂಬೆ ಹಣ್ಣುಗಳು ಕಿಡ್ನಿ ಸಂಬಂಧಿತ ಸಮಸ್ಯೆಗಳನ್ನು ನಿಭಾಯಿಸಲು ಪರಿಣಾಮಕಾರಿ. ಅಲ್ಲದೆ, ಯಕೃತ್ ಡಿಟಾಕ್ಸ್ ಮಾಡುವಲ್ಲಿಯೂ ಕೊಡುಗೆ ನೀಡುತ್ತದೆ.

ಎಲ್ಲಾ ಋತುಗಳಲ್ಲೂ ಬಹಳ ಸುಲಭವಾಗಿ ಸಿಗುವ ಪರಂಗಿ ಹಣ್ಣು ಲಿವರ್ ಆರೋಗ್ಯಕ್ಕೆ ಸಂಜೀವಿನಿ ಇದ್ದಂತೆ. ಇದರಲ್ಲಿರುವ ಆಹಾರ ಪ್ರೋಟೀನ್‌ಗಳ ವಿಭಜನೆಯನ್ನು ಬೆಂಬಲಿಸುವ ಕಿಣ್ವಗಳು ಫ್ಯಾಟಿ ಲಿವರ್ ಸಮಸ್ಯೆಗೆ ರಾಮಬಾಣ. ಮೂತ್ರಪಿಂಡಗಳನ್ನು ಆರೋಗ್ಯವಾಗಿರಿಸುವಲ್ಲಿ

ಲಿಮೋನಾಯ್ಡ್‌ಗಳಿಂದ ಸಮೃದ್ಧವಾಗಿರುವ ಮೋಸಂಬಿ ಹಣ್ಣು ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಯಕೃತ್ತಿನ ಕಿಣ್ವಗಳನ್ನು ಉತ್ತೇಜಿಸುವ ಸಂಯುಕ್ತವಾಗಿದೆ. ಇದನ್ನು ತಿನ್ನುವುದರಿಂದ ಕಿಡ್ನಿ ಸ್ಟೋನ್, ಕಿಡ್ನಿ ಸೋಂಕಿನ ಅಪಾಯಗಳು ಸಹ ಕಡಿಮೆ.

ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುವ ಕಲ್ಲಂಗಡಿ ಹಣ್ಣು ಕಿಡ್ನಿಗಳ ಮೇಲೆ ಒತ್ತಡ ಹೇರದೆ ಮೂತ್ರದ ಹರಿವನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಸಿಟ್ರುಲಿನ್ ದೇಹದಲ್ಲಿ ರಕ್ತದ ಹರಿವನ್ನು ಸುಧಾರಿಸಲು ಯಕೃತ್ ಸರಾಗವಾಗಿ ಕಾರ್ಯನಿರ್ವಹಿಸಲು ಸಹಕಾರಿ ಆಗಿದೆ.

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ನಮ್ಮ NEWS ಚಾನಲ್ ಇದನ್ನು ಖಚಿತಪಡಿಸುವುದಿಲ್ಲ

ಹೆಚ್ಚಿನ ಸುದ್ದಿ