Saturday, June 13, 2026
Homeರಾಜ್ಯಶೀಘ್ರದಲ್ಲಿಯೇ ಮುದ್ದೇಬಿಹಾಳ ಜನತೆಗೆ ಸಿಗಲಿದೆ ಸಕಲ ಸೌಲಭ್ಯ ಉಳ್ಳ ಉದ್ಯಾನವನ...!!!

ಶೀಘ್ರದಲ್ಲಿಯೇ ಮುದ್ದೇಬಿಹಾಳ ಜನತೆಗೆ ಸಿಗಲಿದೆ ಸಕಲ ಸೌಲಭ್ಯ ಉಳ್ಳ ಉದ್ಯಾನವನ…!!!

ಮುದ್ದೇಬಿಹಾಳ:
ಪಟ್ಟಣದ ಸಾಯಿ ನಗರದಲ್ಲಿ ಕೆಬಿಜೆಎನ್‌ಎಲ್ ಅರಣ್ಯ ವಿಭಾಗದಿಂದ ನೂತನವಾಗಿ ನಿರ್ಮಿಸುತ್ತಿರುವ ಉದ್ಯಾನವನ ಕಾಮಗಾರಿಯನ್ನು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹಾಗೂ ಕೆಬಿಜೆಎನ್‌ಎಲ್ ಅಧಿಕಾರಿಗಳು ಶನಿವಾರ ವಿಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು, ಇಂತಹ ಉದ್ಯಾನವನ್ನು ಪಟ್ಟಣದಲ್ಲಿ ನಿರ್ಮಿಸಿದ್ದು ಇದರಲ್ಲಿ ಯೋಗದಾಮ, ವ್ಯಾಯಾಮ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಿದ್ದ ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಕೆಬಿಜೆಎನ್‌ಎಲ್ ಅರಣ್ಯ ವಿಭಾಗದಿಂದ ಉದ್ಯಾನವನವನ್ನು

ಪುರಸಭೆ ಕಬ್ಜಾ ಪಡೆದುಕೊಂಡು ಕಮೀಟಿಯನ್ನು ರಚಿಸಿ ಅದರ ಮೂಲಕ ನಿರ್ವಹಣೆಯನ್ನು ಮಾಡಬೇಕು. ಪ್ರತಿಯೊಬ್ಬರಿಗೂ ಕನಿಷ್ಠದ ಪ್ರವೇಶದ ಶುಲ್ಕುವನ್ನು ವಿಧಿಸಿ ಅದರಿಂದ ಬರುವ ಆದಾಯದಲ್ಲಿಯೇ ಉದ್ಯಾನವನಕ್ಕೆ ರಕ್ಷಣಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು. ಅಲ್ಲದೇ ಸಾರ್ವಜನಿಕರೂ ಇದಕ್ಕೆ ಸಹಕರಿಸಬೇಕು ಎಂದು ಹೇಳಿದರು.
ಅಂದಾಜು 2.3ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ಬಸವ ನಗರ, ಸಂಗಮೇಶ್ವರ ನಗರ ಹಾಗೂ ಸಾಯಿ ನಗರಗಳಲ್ಲಿ ಹಿರಿಯ ನಾಗರಿಕರಿಗೆ ವಾಯುವಿಹಾರಕ್ಕೆ ಹಾಗೂ ಪುಟ್ಟ ಮಕ್ಕಳಿಗೆ ಆಟವಾಡಲು ಸುಸಜ್ಜಿತವಾದ ಉದ್ಯಾನವನ್ನು ನಿರ್ಮಿಸಲಾಗಿದೆ. ಅತೀ ಶೀಘ್ರದಲ್ಲಿಯೇ ಇವುಗಳನ್ನು ಪುರಸಭೆ ವ್ಯಾಕ್ತಿಗೆ ಒಳಪಡಿಸಿ ಸಾರ್ವಜನಿಕರಿಗೆ ಬಳಕೆಗೆ ಮಾಡಿಕೊಡಲಾಗುವುದು ಎಂದು ಕೆಬಿಜೆಎನ್‌ಎಲ್ ಅರಣ್ಯ ವಿಭಾಗಾಧಿಕಾರಿ ಮಹೇಶ ಪಾಟೀಲ ತಿಳಿಸಿದರು.


ಈ ಸಂದರ್ಭದಲ್ಲಿ ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್ ಮಾಜಿ ಅಧ್ಯಕ್ಷ ಸತೀಶ ಓಸ್ವಾಲ್, ಸುರೇಶ ಪಾಟೀಲ, ನ್ಯಾಯವಾದಿ ನಾವದಗಿ, ರುದ್ರಗೌಡ ಅಂಗಡಗೇರಿ, ಸಿದ್ದರಾಜ ಹೊಳಿ, ಮಾಜಿ ಪುರಸಭೆ ಸದಸ್ಯ ಯಲ್ಲಪ್ಪ ನಾಯಕಮಕ್ಕಳ, ಗೋಪಿ ಮಡಿವಾಳರ, ವೆಂಕನಗೌಡ ಪಾಟೀಲ, ಸಂಗನಗೌಡ ಪಾಟೀಲ, ಜಾವೀದ ಜಾನ್ವೇಕರ್, ಮುತ್ತು ನಾಯ್ಕೋಡಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಕೆಬಿಜೆಎನ್‌ಎಲ್ ಅರಣ್ಯ ವಿಭಾಗದ ಅಧಿಕಾರಿಗಳು, ಮುದ್ದೇಬಿಹಾಳ ವಲಯ ಅರಣ್ಯಾಧಿಕಾರಿಗಳು ಇದ್ದರು.

ಹೆಚ್ಚಿನ ಸುದ್ದಿ