Thursday, April 23, 2026
Homeಚುನಾವಣೆ 2023ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ ರೈಲುಗಳ 2 ಟ್ರಿಪ್​​​ ರದ್ದು

ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ ರೈಲುಗಳ 2 ಟ್ರಿಪ್​​​ ರದ್ದು

ಬೆಂಗಳೂರು: ಭಾರತ್ ಗೌರವ್ ಕಾಶಿ ದರ್ಶನ ವಿಶೇಷ ರೈಲುಗಳು ಎರಡು ಪ್ರವಾಸಗಳನ್ನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರಕ್ಕೆ ಚುನಾವಣಾ ಆಯೋಗ ಸೂಚಿಸಿದೆ.

ಆಯೋಗದ ನಿರ್ದೇಶನದಂತೆ ಏಪ್ರಿಲ್ 14 ಮತ್ತು 28 ರಂದು ನಿಗದಿಯಾಗಿದ್ದ ಎರಡು ಪ್ರವಾಸಗಳನ್ನು ರದ್ದುಗೊಳಿಸಲಾಗಿದೆ ಎಂದು ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಇಲಾಖೆಯು ಮಾರ್ಚ್ 25 ರಿಂದ ಭಾರತೀಯ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ನ (IRCTC) ಪೋರ್ಟಲ್ ಮೂಲಕ ಬುಕಿಂಗ್ ಸ್ವೀಕರಿಸಲು ಪ್ರಾರಂಭಿಸಿತ್ತು.

ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ನಂತರ ರಾಜ್ಯ ಸರ್ಕಾರ ರಾಜ್ಯದ ವಿವಿಧ ಭಾಗಗಳಿಂದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗರಾಜ್‌ಗೆ ರೈಲು ಓಡಿಸಲು ಅನುಮತಿ ಕೋರಿ ಚುನಾವಣಾ ಆಯೋಗವನ್ನು ಸಂಪರ್ಕಿಸಿತ್ತು. ನಿಗದಿತ ಪ್ರವಾಸಗಳ ಬುಕ್ಕಿಂಗ್ ಅನ್ನು ತಕ್ಷಣವೇ ರದ್ದುಗೊಳಿಸುವಂತೆ ಚುನಾವಣಾ ಆಯೋಗ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಿಂದ ಭಾರತ್ ಗೌರವ್ ಟೂರಿಸ್ಟ್ ರೈಲಿಗೆ ಚಾಲನೆ ನೀಡಿದರು. ಸೇವೆಯನ್ನು ಒದಗಿಸಲು ರಾಜ್ಯ ಸರ್ಕಾರವು IRCTC ಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರಾಜ್ಯ ಸರ್ಕಾರದ ನಿರ್ಧಾರದಂತೆ, ಮುಂಗಡ ಟಿಕೆಟ್​ ಕಾಯ್ದಿರಿಸುವ ಪ್ರತಿ ವ್ಯಕ್ತಿಗೆ 5,000 ವಿಶೇಷ ರಿಯಾಯಿತಿ ನೀಡಲಾಗಿದೆ. ಒಬ್ಬರಿಗೆ ಟಿಕೆಟ್ ದರ 20,000 ರೂ. ಇದೆ.

ಹೆಚ್ಚಿನ ಸುದ್ದಿ