Tuesday, June 30, 2026
Homeರಾಜ್ಯಮುಂಡಗೋಡದಲ್ಲಿ ವಿದ್ಯುತ್ ಸ್ಪರ್ಶಿಸಿ ಯುವಕ Saaವು; ಹೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

ಮುಂಡಗೋಡದಲ್ಲಿ ವಿದ್ಯುತ್ ಸ್ಪರ್ಶಿಸಿ ಯುವಕ Saaವು; ಹೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

ಮುಂಡಗೋಡದಲ್ಲಿ ವಿದ್ಯುತ್ ಸ್ಪರ್ಶಿಸಿ ಯುವಕ Saaವು; ಹೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

ಮುಂಡಗೋಡ: ತಾಲೂಕಿನ ಜೋಗೆಶ್ವರಹಳ್ಳ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಯುವಕನೊಬ್ಬ ಮೃ. ತಪಟ್ಟಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಈ ಸಂಬಂಧ ಹೆಸ್ಕಾಂ ಲೈನ್‌ಮ್ಯಾನ್ ಹಾಗೂ ಸೆಕ್ಷನ್ ಆಫೀಸರ್ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃ. ತರನ್ನು ಜಾನು ಕೊಕ್ಕರೆ (26) ಎಂದು ಗುರುತಿಸಲಾಗಿದೆ. ಜೋಗೆಶ್ವರಹಳ್ಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದ ಬಳಿ ಹೆಸ್ಕಾಂ ಅಳವಡಿಸಿದ್ದ ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿಯ ನಿರ್ಲಕ್ಷ್ಯ ನಿರ್ವಹಣೆಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಜೂನ್ 28ರಂದು ಸಂಜೆ ಸುಮಾರು 6.30 ಗಂಟೆ ವೇಳೆಗೆ ಜಾನು ಅವರು ಶಾಲಾ ಆವರಣದಲ್ಲಿದ್ದ ಹೂವುಗಳನ್ನು ಕೀಳಲು ತೆರಳಿದ್ದ ವೇಳೆ ವಿದ್ಯುತ್ ತಂತಿಯಿಂದ ವಿದ್ಯುತ್ ಹರಿದು ಅವರ ಕಾಲಿಗೆ ತಗುಲಿದೆ. ಪರಿಣಾಮ ಸ್ಥಳದಲ್ಲೇ ಬಿದ್ದು ಒದ್ದಾಡಿ ಮೃ. ತಪಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಮೃ.ತನ ಸಹೋದರ ವಿಠಲ ಕೊಕ್ಕರೆ ಅವರು ನೀಡಿದ ದೂರಿನ ಮೇರೆಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಸ್ಕಾಂ ಲೈನ್‌ಮ್ಯಾನ್ ಹಾಗೂ ಸೆಕ್ಷನ್ ಆಫೀಸರ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿದೆ.ಘಟನೆಯ ಕುರಿತು ಮುಂಡಗೋಡ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

ಹೆಚ್ಚಿನ ಸುದ್ದಿ