Monday, July 7, 2025
Homeಚುನಾವಣೆ 2023ಕೆಲ ಶಕುನಿಗಳು ರೇವಣ್ಣ ತಲೆಕೆಡಿಸುತ್ತಿದ್ದಾರೆ: ಹೆಚ್‌ಡಿಕೆ

ಕೆಲ ಶಕುನಿಗಳು ರೇವಣ್ಣ ತಲೆಕೆಡಿಸುತ್ತಿದ್ದಾರೆ: ಹೆಚ್‌ಡಿಕೆ

ಹಾಸನ ಜೆಡಿಎಸ್‌ ಟಿಕೆಟ್‌ ಕುರಿತು ಎಚ್‌.ಡಿ. ರೇವಣ್ಣ ನನ್ನ ಬಳಿ ಚರ್ಚಿಸಿಯೇ ಇಲ್ಲ. ಈ ಬಗ್ಗೆ ನನ್ನ ಮನವೊಲಿಸಲು ಅವರಿಗೆ ಭಯ ಇದೆ. ದುರಾದೃಷ್ಟವೆಂದರೆ, ದೇವೇಗೌಡರಿಗೂ ರೇವಣ್ಣ ರನ್ನು ಮನವೊಲಿಸುವ ಶಕ್ತಿ ಇಲ್ಲ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ನೀಡಿ ಗೆಲ್ಲಿಸುವ ನನ್ನ ಆಸೆಯನ್ನು ಹಾಳು ಮಾಡಲು ಹಾಸನದ ಕೆಲವರು ಮುಂದಾಗಿದ್ದಾರೆ. ಮನೆ ಹಾಳು ಕೆಲಸ ಮಾಡುತ್ತಿದ್ದಾರೆ. ಶಕುನಿಗಳಂತೆ ಬ್ರೇನ್‌ವಾಶ್‌ ಮಾಡುತ್ತಿದ್ದಾರೆ. ಆದರೂ ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ನೀಡಬೇಕು ಎನ್ನುವ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಹೆಚ್‌ಡಿಕೆ ಸ್ಪಷ್ಟಪಡಿಸಿದ್ದಾರೆ.

ಹಾಸನದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಭವಾನಿ ರೇವಣ್ಣರನ್ನು ಘೋಷಿಸಬೇಕೆಂದು ರೇವಣ್ಣ ಕುಟುಂಬ ಪಟ್ಟು ಹಿಡಿದಿದ್ದು, ಕೊಟ್ಟರೆ ಸಾಮಾನ್ಯ ಕಾರ್ಯಕರ್ತನಿಗೆ ಮಾತ್ರ ಟಿಕೆಟ್‌ ಕೊಡಬಲ್ಲೆ ಎಂದು ಹೆಚ್‌ಡಿಕೆ ಕೂಡಾ ಹಠ ಹಿಡಿದಿದ್ದಾರೆ. ಈ ನಡುವೆ, ಪತ್ನಿಗೆ ಟಿಕೆಟ್‌ ನೀಡದಿದ್ದರೆ ನನಗೂ ಟಿಕೆಟ್‌ ಬೇಡವೆಂದು ರೇವಣ್ಣ ಹಠ ಮಾಡಿದ್ದಾರೆ.

ಹೆಚ್ಚಿನ ಸುದ್ದಿ