Friday, June 19, 2026
Homeದೇಶಅಮೂಲ್ vs ನಂದಿನಿ : ಅಮೂಲ್ ಎಂ.ಡಿ ಮೊದಲ ಪ್ರತಿಕ್ರಿಯೆ

ಅಮೂಲ್ vs ನಂದಿನಿ : ಅಮೂಲ್ ಎಂ.ಡಿ ಮೊದಲ ಪ್ರತಿಕ್ರಿಯೆ

ಬೆಂಗಳೂರು: ರಾಜ್ಯದಲ್ಲಿ ಅಮುಲ್-ನಂದಿನಿ‌ ತಾರಕಕ್ಕೇರಿದ್ದು, ಈ ನಡುವೆ ಪ್ರತಿಕ್ರಿಯೆ ನೀಡಿರುವ ಅಮುಲ್ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ, ಎರಡೂ ಸಂಸ್ಥೆಗಳ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.

ಎರಡೂ ಕಂಪೆನಿಗಳು ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿದ್ದು, ಇನ್ನೂ ಮುಂದುವರಿಯಲಿದೆ ಎಂದರು.

ಅಮುಲ್ ಮತ್ತು ನಂದಿನಿ ಎರಡೂ ಸಂಸ್ಥೆಗಳು ಭಾರತವನ್ನು ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಕ ದೇಶವನ್ನಾಗಿ‌ ಮಾಡಲು ಜೊತೆಯಾಗಿ ಜೊತೆಗೆ ಕೆಲಸ ಮಾಡುತ್ತಿದೆ. ಅಮುಲ್ ನ ಐಸ್ ಕ್ರೀಮ್ ಕಳೆದ 25 ವರ್ಷಗಳಿಂದ ನಂದಿನಿ ಒಡೆತನದ ಕರ್ನಾಟಕದ ಮೂರು ಘಟಕಗಳಲ್ಲಿ ತಯಾರಿಸಲಾಗುತ್ತಿದೆ. ಕೊರೋನ ಸಾಂಕ್ರಾಮಿಕ ಸಮಯದಲ್ಲಿ ನಾವು ನಂದಿನಿಯಿಂದ ಐದು ಟನ್ ಚೀಸ್ ಖರೀದಿಸಿದ್ದೇವೆ ಎಂದವರು ಹೇಳಿದರು.

ಹೆಚ್ಚಿನ ಸುದ್ದಿ