ಬೆಂಗಳೂರು: ಮೊದಲ ಪಟ್ಟಿ ಘೋಷಿಸಿ ಬಂಡಾದ ಬಿಸಿಯಲ್ಲಿ ಬೇಯುತ್ತಿರುವ ಬಿಜೆಪಿ ಎರಡನೇ ಲಿಸ್ಟ್ ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲೂ 7 ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿದ್ದು ಮತ್ತಷ್ಟು ಬಂಡಾಯ ಹೆಚ್ಚುವ ಸಾಧ್ಯತೆ ಇದೆ.
ಹಾವೇರಿ ಶಾಸಕ ನೆಹರು ಓಲೇಕಾರ್, ಮಾಯಕೊಂಡ ಶಾಸಕ ಲಿಂಗಣ್ಣ, ಮೂಡಿಗೆರೆ ಶಾಸಕ ಕುಮಾರ್ ಸ್ವಾಮಿ, ಚನ್ನಗಿರಿ ಕ್ಷೇತ್ರದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಬೈಂದೂರು ಸುಕಮಾರ್ ಶೆಟ್ಟಿ, ಕಲಘಟಗಿಯ ನಿಂಬಣ್ಣನವರ್, ದಾವಣಗೆರೆ ಉತ್ತರದ ರವೀಂದ್ರನಾಥ್ ಗೆ ಟಿಕೆಟ್ ಮಿಸ್ ಆಗಿದೆ.
ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ನಡೆದ ಬಿಜೆಪಿ ವಿಯಜಸಂಕಲ್ಪ ರಥಯಾತ್ರೆ ವೇಳೆ ಎಂಪಿ ಕುಮಾರಸ್ವಾಮಿ ಬೆಂಬಲಿಗರು, ಬಿಎಸ್‌ವೈ ಕಾರಿಗೆ ಮುತ್ತಿಗೆ ಹಾಕಿ ರಂಪಾಟ ನಡೆಸಿದ್ದರು. ಅದಲ್ಲದೇ ಪತ್ನಿಯೊಂದಿಗಿನ ಬೀದಿ ಜಗಳ, ಇವೆಲ್ಲವನ್ನೂ ಗಮನಿಸಿರುವ ಪಕ್ಷ ಕುಮಾರಸ್ವಾಮಿಗೆ ಟಿಕೆಟ್ ನೀಡಿಲ್ಲ ಎನ್ನಲಾಗಿದೆ.
ಇತ್ತ ಕೆಎಸ್‌ಡಿಎಲ್ ಲಂಚಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಮಾಡಾಳು ವಿರೂಪಾಕ್ಷಪ್ಪಗೆ ಟಿಕೆಟ್ ಸಹಜವಾಗಿಯೇ ಕೈತಪ್ಪಿದೆ.
ಹಾವೇರಿ ಶಾಸಕರಾಗಿದ್ದ ನೆಹರು ಓಲೆಕಾರ್, ಸರ್ಕಾರಿ ಹಣ ದುರುಪಯೋಗ ಕೇಸ್‌ನಲ್ಲಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಈಗ ಬಿಜೆಪಿ ಟಿಕೆಟ್ ಕಳೆದುಕೊಂಡಿದ್ದಾರೆ
2ನೇ ಪಟ್ಟಿಯಲ್ಲಿ ಐವರು ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಆಗಿದ್ದು, ಈ ಮೂಲಕ ಇಲ್ಲಿವರೆಗೆ ಒಟ್ಟು 13 ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಆಗಿದೆ.
