ಟೆಕ್ಸಾಸ್: ಡೈರಿ ಫಾರ್ಮ್‌ನಲ್ಲಿ ನಡೆದ ಸ್ಫೋಟದಲ್ಲಿ ಸುಮಾರು 18,000 ಹಸುಗಳು ಸಾವನ್ನಪ್ಪಿರುವ ಘಟನೆ ಅಮೆರಿಕಾದ ಟೆಕ್ಸಾಸ್ ನಲ್ಲಿ ನಡೆದಿದೆ.
ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಂತ್ರೋಪಕರಣಗಳಿಂದ ಹೊರಬಂದ ಮೀಥೇನ್ ಗ್ಯಾಸ್ ಈ ಬೆಂಕಿಗೆ ಕಾರಣ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಫೋಟದ ತೀವ್ರತೆಗೆ 18,000 ಜಾನುವಾರುಗಳು ಸಾವನ್ನಪ್ಪಿದ್ದು, ಇದು ಅಮೆರಿಕದಲ್ಲಿ ಮಾಂಸಕ್ಕಾಗಿ ಕೊಲ್ಲಲಾಗುವ ಹಸುಗಳ ಪ್ರಮಾಣಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚು ಎನ್ನಲಾಗಿದೆ.
