Saturday, April 25, 2026
Homeದೇಶಮನೆ ಖಾಲಿ ಮಾಡಿದ ರಾಹುಲ್ ಗಾಂಧಿ: ವಸ್ತುಗಳು ತಾಯಿಯ ಮನೆಗೆ ಶಿಫ್ಟ್

ಮನೆ ಖಾಲಿ ಮಾಡಿದ ರಾಹುಲ್ ಗಾಂಧಿ: ವಸ್ತುಗಳು ತಾಯಿಯ ಮನೆಗೆ ಶಿಫ್ಟ್

ನವದೆಹಲಿ: ಲೋಕಸಭೆ ಸದಸ್ಯತ್ವ ಕಳೆದುಕೊಂಡಿರುವುದರಿಂದ ಏ.22ರ ವೇಳೆಗೆ  ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಾವು ವಾಸಿಸುತ್ತಿದ್ದ ಬಂಗಲೆ ಖಾಲಿ ಮಾಡುತ್ತಿದ್ದಾರೆ.

12, ತುಘ್ಲಕ್ ಲೇನ್ ನಿವಾಸವನ್ನು ರಾಹುಲ್ ಗಾಂಧಿ ತೊರೆದಿದ್ದಾರೆ. ಅವರ ನಿವಾಸದ ಎದುರು ನಿಂತಿದ್ದ 2 ಟ್ರಕ್ ಗಳ ಮೂಲಕ ತಮ್ಮ ವಸ್ತುಗಳನ್ನು, 10, ಜನ್ಪಥ್ ನಲ್ಲಿರುವ ತಮ್ಮ ತಾಯಿ ಸೋನಿಯಾ ಮನೆಗೆ ವರ್ಗಾಯಿಸಿದ್ದಾರೆ. ಶೀಘ್ರವೇ ರಾಹುಲ್ ಗಾಂಧಿ ಬಂಗಲೆಯಿಂದ ಹೊರನಡೆಯಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತೊಂದು ಮನೆಗಾಗಿ ರಾಹುಲ್ ಗಾಂಧಿ ಹುಡುಕುತ್ತಿದ್ದು, ತಮ್ಮ ತಾಯಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಟ್ಟಿಗೆ ವಾಸಿಸಬಹುದು ಎಂದು ಹೇಳಲಾಗುತ್ತಿದೆ.
ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯದಿಂದ ಎರಡು ವರ್ಷಗಳ ಶಿಕ್ಷೆ ಮತ್ತು ಶಿಕ್ಷೆಯ ನಂತರ ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ಏಪ್ರಿಲ್ 22 ರೊಳಗೆ ನಿವೇಶನವನ್ನು ಖಾಲಿ ಮಾಡುವಂತೆ ಲೋಕಸಭೆ ಸೆಕ್ರೆಟರಿಯೇಟ್ ರಾಹುಲ್ ಗಾಂಧಿಗೆ ನೋಟಿಸ್ ಕಳುಹಿಸಿತ್ತು.

ಹೆಚ್ಚಿನ ಸುದ್ದಿ