ನವದೆಹಲಿ: ರಾಜಸ್ಥಾನ ಕಾಂಗ್ರೆಸ್ ನಲ್ಲಿ ಪಕ್ಷದೊಳಗಿನ ಅಸಮಾಧಾನವನ್ನು ಶಮನಗೊಳಿಸಲು ಕಾಂಗ್ರೆಸ್ ನಾಯಕತ್ವ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಈ ಬಾರಿ ಕಾಂಗ್ರೆಸ್ ನಾಯಕತ್ವ ರಾಜ್ಯದ ಪ್ರತಿ ನಾಯಕರನ್ನು ವೈಯಕ್ತಿಕವಾಗಿ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ಈ ಭೇಟಿಯ ಸಂದರ್ಭ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪಕ್ಷದ ಉಸ್ತುವಾತಿ ಸುಖ್ಜಿಂದರ್ ಸಿಂಗ್ ರಾಂಧವ ಸೇರಿ ಹಲವು ನಾಯಕರು ಇರಲಿದ್ದಾರೆ.
ಮೂರು ದಿನಗಳ ಕಾಲ ಪಕ್ಷದ ಮತ್ತು ಪಕ್ಷವನ್ನು ಬೆಂಬಲಿಸುವ ಶಾಸಕರ ಸಭೆ ನಡೆಯಲಿದ್ದು, ಪಕ್ಷದ ನಾಯಕರು , ಸಂಸದರು, ಶಾಸಕರಿಗೆ ಕಾರ್ಯಾಗಾರ ನಡೆಯಲಿದೆ ಎನ್ನಲಾಗಿದೆ.
