ರಾಜ್ಯದಲ್ಲಿ ಅಮೂಲ್-ಕೆಎಂಎಫ್ ವಿವಾದದ ಕಾವು ಇದ್ದ ನಡುವಲ್ಲೆ ರಾಹುಲ್ ಗಾಂಧಿ ಇಂದು ಬೆಂಗಳೂರಿನಲ್ಲಿ ನಂದಿನಿ ಬೂತ್ ಗೆ ತೆರಳಿ ನಂದಿನಿ ಐಸ್ ಕ್ರೀಂ ಸವಿದಿದ್ದಾರೆ.
ಜೆಪಿ ನಗರದಲ್ಲಿ ಪೌರ ಕಾರ್ಮಿಕರ ಜೊತೆಗಿನ ಸಂವಾದ ಮುಗಿದ ಬಳಿಕ ನಂದಿನಿ ಬೂತ್‌ಗೆ ತೆರಳಿದ ರಾಹುಲ್ ಗಾಂಧಿ ನಂದಿನಿ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬಳಿಕ ನಂದಿನಿ ಉತ್ಪನ್ನಗಳು ಎಲ್ಲಿಂದ ಬರುತ್ತೆ, ಎಷ್ಟು ವರ್ಷದಿಂದ ನೀವು ಈ ಕೆಲಸ ಮಾಡ್ತಿದಿರಿ ಎಂದು ರಾಗಾ ಕೇಳಿದ ಪ್ರಶ್ನೆಗೆ ಬಳ್ಳಾರಿಯಿಂದ ನಂದಿನಿ ಉತ್ಪನ್ನಗಳು ಬರುತ್ತೆ ಎಂದು ನಂದಿನಿ ಬೂತ್ ಮಾಲೀಕರು ಮಾಹಿತಿ ನೀಡಿದ್ದಾರೆ. ಕೊನೆಗೆ ರಾಹುಲ್ ಗಾಂಧಿ ಜೊತೆ ಬೂತ್ ಮಾಲೀಕ ಫೋಟೋ ತೆಗೆಸಿಕೊಂಡರು. ರಾಗಾಗೆ ಡಿಕೆ ಶಿವಕುಮಾರ್, ವೇಣುಗೋಪಾಲ್ ಹಾಗೂ ಇನ್ನಿತರ ಕೈ ಮುಖಂಡರು ಸಾಥ್ ನೀಡಿದ್ದಾರೆ