ಸೂರತ್ : ಮೂಢನಂಬಿಕೆಯ ಹಿಂದೆ ಬಿದ್ದ ದಂಪತಿ ತಮ್ಮ ತಲೆಯನ್ನೇ ಕತ್ತರಿಸಿಕೊಂಡು ಬಲಿ ನೀಡಿದ ಘಟನೆ ಗುಜರಾತ್ ನ ರಾಜ್ ಕೋಟ್ ನಲ್ಲಿ ನಡೆದಿದೆ.
ಮನೆಯಲ್ಲೇ ತಯಾರಿಸಿದ್ದ ದೊಡ್ಡ ಬ್ಲೇಡ್ ನಂತಹ ವಸ್ತುವಿನಿಂದ ಇಬ್ಬರೂ ತಲೆ ಕತ್ತರಿಸಿಕೊಂಡಿದ್ದಾರೆ. ಮೃತರನ್ನು ಹೇಮುಭಾಯಿ ಮಕ್ವಾನಾ (38) ಮತ್ತು ಪತ್ನಿ ಹಂಸಬೆನ್ (35) ಎಂದು ಗುರುತಿಸಲಾಗಿದೆ.
ತಲೆ ಕತ್ತರಿಸಿದ ನಂತರ ಬೆಂಕಿಯ ಬಲಿಪೀಠಕ್ಕೆ ತಲೆ ಉರಿಳುವ ಹಾಗೆ ಅವರು ತಯಾರಿ ನಡೆಸಿದ್ದರು ಎನ್ನಲಾಗಿದೆ.