ಬೆಂಗಳೂರು: ಚಪ್ಪಲಿಯಲ್ಲಿ ಬಚ್ಚಿಟ್ಟು ₹ 69.40 ಲಕ್ಷ ಮೌಲ್ಯದ ಚಿನ್ನಾಭರಣ ಸಾಗಿಸಲು ಯತ್ನಿಸಿದ ಪ್ರಯಾಣಿಕರೊಬ್ಬರನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬೆಂಗಳೂರು ಏರ್ಪೋರ್ಟ್ನಲ್ಲಿ ಬಂಧಿಸಿದ್ದಾರೆ.
ಮಾರ್ಚ್ 12 ರಂದು, ಇಂಡಿಗೋ ವಿಮಾನ 6E 76 ಮೂಲಕ ಬ್ಯಾಂಕಾಕ್ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕರನ್ನು ಬೆಂಗಳೂರು ಕಸ್ಟಮ್ಸ್ ಏರ್ ಇಂಟೆಲಿಜೆನ್ಸ್ ಅಧಿಕಾರಿಗಳು ಸಹಜ ತಪಾಸಣೆಗಾಗಿ ತಡೆದಿದ್ದಾರೆ. ಪ್ರಯಾಣದ ಉದ್ದೇಶವನ್ನು ಕೇಳಿದಾಗ, ಪ್ರಯಾಣಿಕನು ವೈದ್ಯಕೀಯ ಉದ್ದೇಶಕ್ಕಾಗಿ ಪ್ರಯಾಣಿಸುತ್ತಿದ್ದೇನೆ ಎಂದು ಹೇಳಿದರು. ಆದರೆ, ಅವರು ಯಾವುದೇ ವೈದ್ಯಕೀಯ ದಾಖಲೆಗಳನ್ನು ನೀಡದಿದ್ದರಿಂದ ಅನುಮಾನಗೊಂಡ ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ
ಈ ವೇಳೆ ಪ್ರಯಾಣಿಕರ ಬ್ಯಾಗ್, ದೇಹ ಸ್ಕ್ಯಾನಿಂಗ್ ಮಾಡಿದಾಗ, ಪ್ರಯಾಣಿಕರು ಧರಿಸಿದ್ದ ಚಪ್ಪಲಿಯಲ್ಲಿ ಕಟ್ ಪೀಸ್ ರೂಪದಲ್ಲಿ ಚಿನ್ನ ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ. ಚಪ್ಪಲಿಗಳ ಒಳಗೆ ಬಚ್ಚಿಡಲಾಗಿದ್ದ ಚಿನ್ನದ ಒಟ್ಟು ನಾಲ್ಕು ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಕಸ್ಟಮ್ಸ್ ಅಧಿಕಾರಿ ತಿಳಿಸಿದ್ದಾರೆ. ಒಟ್ಟು ರೂ. 69.40 ಲಕ್ಷ ಮೌಲ್ಯದ 24 ಕ್ಯಾರೆಟ್ನ ಶುದ್ಧತೆ ಹೊಂದಿರುವ ಕನಿಷ್ಠ 1.2 ಕೆಜಿ ವಶಪಡಿಸಿಕೊಳ್ಳಲಾಗಿದೆ.
