Tuesday, July 8, 2025
Homeಟಾಪ್ ನ್ಯೂಸ್ಚುನಾವಣೆ ಹೊತ್ತಲ್ಲಿ ಘರ್‌ ವಾಪಸಿ ಪರ್ವ: ಎ.ಬಿ ಮಾಲಕರೆಡ್ಡಿ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

ಚುನಾವಣೆ ಹೊತ್ತಲ್ಲಿ ಘರ್‌ ವಾಪಸಿ ಪರ್ವ: ಎ.ಬಿ ಮಾಲಕರೆಡ್ಡಿ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

ಯಾದಗಿರಿ: ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ಸೇರ್ಪಡೆಯಾಗಿರುವ ಬೆನ್ನಲ್ಲೇ ಮತ್ತೊಬ್ಬ ಮಾಜಿ ಸಚಿವ ಎ.ಬಿ ಮಾಲಕರೆಡ್ಡಿ ಮರಳಿ  ಕಾಂಗ್ರೆಸ್‌ಗೆ ಬರುವ ಸಾಧ್ಯತೆ ಇದೆ. ಯಾದಗಿರಿ ಕ್ಷೇತ್ರದಲ್ಲಿ ಮಾಜಿ ಸಚಿವ ವಾಪಸ್ ಕಾಂಗ್ರೆಸ್ ಸೇರ್ತಾರೆ ಎಂಬ ಸುದ್ದಿ ಹರಿದಾಡ್ತಿದೆ.  ಮಾಲಕರೆಡ್ಡಿ ಪುತ್ರಿ ಡಾ.ಅನುರಾಗಾ ಟಿಕೆಟ್​ಗಾಗಿ ಅರ್ಜಿ ಹಾಕಿದಾಗಲೇ ಮಾಲಕರೆಡ್ಡಿ ಕಾಂಗ್ರೆಸ್ ಸೇರ್ತಾರೆ ಎನ್ನಲಾಗಿತ್ತು.

ಅತೀ ಹೆಚ್ಚು ಲಿಂಗಾಯತ ರೆಡ್ಡಿ ಸಮುದಾಯದ ಮತಗಳಿರುವ ಯಾದಗಿರಿ ಮತಕ್ಷೇತ್ರದಲ್ಲಿ ಪ್ರಬಲ ಲಿಂಗಾಯತ ರೆಡ್ಡಿ ನಾಯಕ ಎನಿಸಿಕೊಂಡಿರುವ ಮಾಲಕರೆಡ್ಡಿ ಈಗ ಕಾಂಗ್ರೆಸ್‌ನತ್ತ ಮುಖ ಮಾಡಿರೋದು ಕಾಂಗ್ರೆಸ್‌ಗೆ ಶಕ್ತಿ ತುಂಬಿದಂತಾಗುತ್ತದೆ.

ಲೋಕಸಭಾ ಚುನಾವಣೆ ವೇಳೆ ಮಾಲಕರೆಡ್ಡಿ ಬಿಜೆಪಿ ಸೇರಿದ್ದರು. ಇದೇ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಲಕರೆಡ್ಡಿ ಸೋಲನುಭವಿಸಿದ್ದರು ಮಾಲಕರೆಡ್ಡಿ, ಚಿಂಚನಸೂರ್ ಹಾಗೂ ಮಾಲೀಕಯ್ಯ ಗುತ್ತೆದಾರ್ ಒಟ್ಟಿಗೆ ಕಾಂಗ್ರೆಸ್ ತ್ಯಜಿಸಿದ್ದರು. ಕಾಂಗ್ರೆಸ್​​ನಿಂದ ಐದು ಬಾರಿ ಶಾಸಕರಾಗಿ ಒಂದು ಬಾರಿ ಸಚಿವರಾಗಿದ್ದ ಮಾಲಕರೆಡ್ಡಿ ಈ ಬಾರಿ ತಮ್ಮ ಮಗಳನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಲು ಚಿಂತನೆ ಮಾಡಿದ್ದಾರೆ.

ಕೋಲಿ ಸಮುದಾಯದ ನಾಯಕ ಚಿಂಚನಸೂರ್, ಕಾಂಗ್ರೆಸ್ ಸೇರ್ಪಡೆಗೊಂಡು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿಯನ್ನು ಸೋಲಿಸೋದಾಗಿ ಹೇಳಿದ್ದಾರೆ. ಇದೀಗ ಮತ್ತೊಂದು ಪ್ರಬಲ ಸಮುದಾಯ ಲಿಂಗಾಯತ ರೆಡ್ಡಿ ಸಮುದಾಯದ ನಾಯಕ ಮಾಲಕರೆಡ್ಡಿ ಕಾಂಗ್ರೆಸ್ ಸೇರುತ್ತಿರೋದ್ರಿಂದ ಬಿಜೆಪಿಗೆ ಆಘಾತದ ಮೇಲೆ ಆಘಾತವಾಗ್ತಿರೋದಂತೂ ಸುಳ್ಳಲ್ಲ.

ಹೆಚ್ಚಿನ ಸುದ್ದಿ