Tuesday, July 8, 2025
Homeಚುನಾವಣೆ 2023ಬಿಜೆಪಿ ಮತ್ತೊಂದು ವಿಕೆಟ್‌ ಪತನ: ಎಮ್‌ಎಲ್‌ಸಿ ಆರ್‌ ಶಂಕರ್‌ ರಾಜಿನಾಮೆ

ಬಿಜೆಪಿ ಮತ್ತೊಂದು ವಿಕೆಟ್‌ ಪತನ: ಎಮ್‌ಎಲ್‌ಸಿ ಆರ್‌ ಶಂಕರ್‌ ರಾಜಿನಾಮೆ

 ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಲಿಸ್ಟ್‌ ಬಿಡುಗಡೆ ಮಾಡುತ್ತಿದ್ದಂತೆ ರಾಜಿನಾಮೆ ಪರ್ವ ಶುರುವಾಗಿದೆ. ಟಿಕೆಟ್ ತಪ್ಪಿದ ನೋವಿನಲ್ಲಿ ರಾಣಿಬೆನ್ನೂರು  ಕ್ಷೇತ್ರದ ಆಕಾಂಕ್ಷಿಯಾಗಿದ್ದ ಆರ್ ಶಂಕರ್‌ ಅವರು ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬೆಂಬಲಿಗರೊಂದಿಗೆ ಬುಧವಾರ ವಿಧಾನಸೌಧಕ್ಕೆ ಆಗಮಿಸಿದ ಆರ್‌ ಶಂಕರ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.  ಈ ವೇಳೆ ಹೊರಟ್ಟಿ ಶಂಕರ್‌ ರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವುದಂತು ಖಚಿತ ಎಂದು ಹೇಳಿರುವ ಆರ್‌ ಶಂಕರ್‌,  ಯಾವುದಾದರೂ ಪಕ್ಷ ಅಥವಾ ಪಕ್ಷೇತರವಾಗಿ ಸ್ಪರ್ಧಿಸಬೇಕೋ ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ.

ಹೆಚ್ಚಿನ ಸುದ್ದಿ