Monday, July 7, 2025
Homeಟಾಪ್ ನ್ಯೂಸ್ರಾಹುಲ್‌ ಅರೆಹುಚ್ಚ, ಸವದಿಗೆ ಬಿಜೆಪಿಯಲ್ಲೇ ಭವಿಷ್ಯ ಇತ್ತು: ಯತ್ನಾಳ್

ರಾಹುಲ್‌ ಅರೆಹುಚ್ಚ, ಸವದಿಗೆ ಬಿಜೆಪಿಯಲ್ಲೇ ಭವಿಷ್ಯ ಇತ್ತು: ಯತ್ನಾಳ್

ರಾಹುಲ್ ಗಾಂಧಿ​​ ಓರ್ವ ಅರೆಹುಚ್ಚ ಎಂದು ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್​ ಯತ್ನಾಳ್ ನಾಲಿಗೆ ಹರಿಬಿಟ್ಟಿದ್ದಾರೆ. ದೇಶಕ್ಕೆ ಮೋದಿಯಂತಹ ನಾಯಕ ಬೇಕಿದೆ. ಜನರು ರಾಹುಲ್ ಗಾಂಧಿಯಂತ ಅರೆಹುಚ್ಚನನ್ನು ಪ್ರಧಾನಿ ಮಾಡ್ತಾರಾ? ಎಂದು ಪ್ರಶ್ನಿಸಿದ್ದಾರೆ.

ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್​​ ಸೇರಿದ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ, ನಾನು ಮಂತ್ರಿಯಾಗಲು, ಡಿಸಿಎಂ ಅರ್ಹನಾಗಿದ್ದೆ, ರಾಜಕಾರಣದಲ್ಲಿ ನನಗೂ ಸಾಕಷ್ಟು ಅಪಮಾನವಾಗಿದೆ. ಈ ಸಿಟ್ಟಿಗೆ ಬಂದು ಪಕ್ಷ ಬಿಡಬಾರದು. ನಾನು ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಿರಲಿಲ್ಲ, ನಮ್ಮದು ವ್ಯಕ್ತಿಗತ ಜಗಳವಿತ್ತು ಎಂದು ಹೇಳಿದ್ದಾರೆ.

 ಪಕ್ಷ ನನ್ನ ಅಮಾನತು ಮಾಡಿದಾಗ ಜೆಡಿಎಸ್ ಸೇರಿದ್ದೆ, ಆದರೆ ಜೆಡಿಎಸ್‌ನಲ್ಲೂ ನನ್ನ ಸಿದ್ದಾಂತ ಬಿಟ್ಟಿರಲಿಲ್ಲ. ಸವದಿ ಅವರನ್ನು ಪಕ್ಷ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದೆ. ಅಮಿತ್​ ಶಾ ಹಾಗೂ ಬಿಎಲ್ ಸಂತೋಷ್ ಸೇರಿದಂತೆ ಎಲ್ಲರೂ ಪ್ರಯತ್ನ ಮಾಡಿದ್ದಾರೆ. ಬಿಜೆಪಿಯಲ್ಲಿ ಮುಂದೆ ಸವದಿಗೆ ಒಳ್ಳೆಯ ಭವಿಷ್ಯವಿತ್ತು. ಆದರೆ ಲಕ್ಷ್ಮಣ ಸವದಿ ದುಡುಕಿದ್ದಾರೆ, ಉದ್ವೇಗಕ್ಕೆ ಒಳಗಾಗಿದ್ದಾರೆ. ಅವಮಾನ ಯಡಿಯೂರಪ್ಪಗೆ ಆಗಿಲ್ವಾ, ಜಗದೀಶ ಶೆಟ್ಟರ್‌ಗೆ ಆಗಿಲ್ವಾ? ಎಂದು ಯತ್ನಾಳ್‌ ಪ್ರಶ್ನಿಸಿದ್ದಾರೆ.

ಹೆಚ್ಚಿನ ಸುದ್ದಿ