Saturday, June 6, 2026
Homeಚುನಾವಣೆ 2023ತಡರಾತ್ರಿ ಬಿಜೆಪಿ ಮೀಟಿಂಗ್, ಸಭೆಯಲ್ಲಿ ಏನಾಯ್ತು?

ತಡರಾತ್ರಿ ಬಿಜೆಪಿ ಮೀಟಿಂಗ್, ಸಭೆಯಲ್ಲಿ ಏನಾಯ್ತು?

ಬೆಂಗಳೂರು: ಅನಿರೀಕ್ಷತ ಬೆಳವಣಿಗೆಗಳಿಂದ ಬಿಜೆಪಿಗೆ ಟೆನ್ಶನ್ ಆದಂತೆ ಇದೆ. ಹಲವು ಪ್ರಮುಖ ನಾಯಕರು ಬಿಜೆಪಿ ತೊರೆಯುತ್ತಿರುವುದು, ಬಂಡಾಯದ ಬಿಸಿ ಹೆಚ್ಚಾಗಿರುವ ವಿಚಾರ ಇವೆಲ್ಲವೂ ಭಾನುವಾರ ತಡರಾತ್ರಿಯ ಮೀಟಿಂಗ್‌ನಲ್ಲಿ ಚರ್ಚೆಯಾಗಿದೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಧರ್ಮೇಂದ್ರ ಪ್ರಧಾನ್, ಬಿ.ಎಲ್ ಸಂತೋಷ್, ಅಣ್ಣಾಮಲೈ, ಸಂಸದ ತೇಜಸ್ವಿ ಸೂರ್ಯ, ಸಿಎಂ ಬೊಮ್ಮಾಯಿ ಸೇರಿದಂತೆ ಹವಲು ಪ್ರಮುಖ ನಾಯಕರು ಪಾಲ್ಗೊಂಡಿದ್ರು.

ಇನ್ನೂ ಟಿಕೆಟ್‌ ಘೋಷಣೆಯಾಗದ ಕ್ಷೇತ್ರಗಳ ಆಕಾಕ್ಷಿಗಳು ಕಚೇರಿಯತತ್ ದೌಡಾಯಿಸಿದ್ರು. ಮಹದೇವಪುರದ ಅರವಿಂದ್‌ ಲಿಂಬಾವಳಿ ಪತ್ನಿ ಮಂಜುಳಾಗೆ ಟಿಕೆಟ್ ನೀಡುವಂತೆ ಕೇಳಿದ್ರೆ, ಗೋವಿಂದರಾಜನಗರ ಕ್ಷೇತ್ರದ ಆಕಾಂಕ್ಷಿ ಸೋಮಣ್ಣ ಪುತ್ರ ಅರುಣ್ ಸೋಮಣ್ಣ ಸಭೆಯಲ್ಲಿ ಹಾಜರಿದ್ರು.

ಈಗಾಗಲೇ ಬಿಜೆಪಿಯ ಲಕ್ಷ್ಣಣ ಸವದಿ ಹಾಗೂ ಜಗದೀಶ್ ಶೆಟ್ಟರ್ ಪಕ್ಷ ತೊರೆದಿದ್ದಾರೆ. ಹೀಗಾಗಿ ಪಕ್ಷದ ಮುಂದಿನ ನಡೆಯ ಬಗ್ಗೆ ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಭೆ ನಡೆದಿದ್ದು, ಕಿತ್ತೂರು ಕರ್ನಾಟಕ ಭಾಗದಲ್ಲಿ ಇಬ್ಬರು ಪ್ರಮುಖ ವೀರಶೈವ- ಲಿಂಗಾಯತ ಸಮುದಾಯದ ನಾಯಕರು ಪಕ್ಷ ಬಿಟ್ಟು ಹೋಗಿರುವ ಕಾರಣ, ಪಕ್ಷಕ್ಕೆ ಆಗಿರುವ ನಷ್ಟವನ್ನು ಸರಿಪಡಿಸುವ ವಿಚಾರಗಳನ್ನು ಚರ್ಚಿಸಲಾಗಿದೆ.

ರಾಜ್ಯದಲ್ಲಿ ಬಾಕಿಯಿರುವ 12 ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಅಂತಿಮ ಮಾಡುವ ವಿಚಾರ. ಬೆಂಗಳೂರಿನ ಗೋವಿಂದರಾಜನಗರ, ಹೆಬ್ಬಾಳ ಹಾಗೂ ಮಹದೇವಪುರ ಟಿಕೆಟ್ ಅಂತಿಮಗೊಳಿಸಿ, ಪಟ್ಟಿಯನ್ನು ಹೈಕಮಾಂಡ್ ನಾಯಕರಿಗೆ ಕಳುಹಿಸುವ ವಿಷಯವನ್ನು ಚರ್ಚಿಸಲಾಗಿದೆ.

ಇನ್ನು, ಪ್ರಧಾನಿಗಳ ಪ್ರಚಾರದ ವೇಳಾಪಟ್ಟಿ ಅಂತಿಮ ಮಾಡುವುದು. ಎರಡೆರಡು ಕ್ಷೇತ್ರಗಳಲ್ಲಿ ಸ್ಫರ್ಧಿಸಿರುವ ಅಭ್ಯರ್ಥಿಗಳು ಹಾಗೂ ವಿವಿಧ ಪಕ್ಷಗಳಲ್ಲಿನ ಬೆಳವಣಿಗೆ ಹೀಗೆ ಸಾಲು ಸಾಲು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಸಭೆಯಲ್ಲಿ ಪ್ರಮುಖ ಪಕ್ಷದ ಪ್ರಮುಖ ನಾಯಕru ಭಾಗಿಯಾಗಿದ್ದರು.

ಹೆಚ್ಚಿನ ಸುದ್ದಿ