ನವದೆಹಲಿ: ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಸೇರಿ ಇನ್ನೂ ಕೆಲವು ನಾಯಕರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅಸ್ಸಾಂ ಯೂತ್ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥೆ ಅಂಗಿತಾ ದತ್ತಾ ಆರೋಪಿಸಿದ್ದಾರೆ.
“ಈ ಕಿರುಕುಳ ಪದೇ ಪದೇ ನಡೆಯುತ್ತಿದೆ. ಈ ಬಗ್ಗೆ ಯುವ ಕಾಂಗ್ರೆಸ್ ಗೆ ನಾನು ದೂರು ನೀಡಿದ್ದೆ. ಆದರೆ ಯಾವ ಪ್ರಯೋಜನವೂ ಅಗಿಲ್ಲ” ಎಂದು ಅಂಗಿತಾ ಹೇಳಿದ್ದಾರೆ.
“ಒಬ್ಬ ಯುವ ಕಾಂಗ್ರೆಸ್ ನಾಯಕ ನನ್ನನ್ನು “ಲಡ್ಕಿ” (ಹುಡುಗಿ) ಎಂದು ಸಂಬೋಧಿಸುತ್ತಾನೆ ಹೊರತು ಮತ್ತು ಡಾ. ದತ್ತಾ ಅಥವಾ ಅಂಗಿತಾ ಎಂದು ಕರೆಯುವುದಿಲ್ಲ. ಛತ್ತೀಸ್‌ಗಢದಲ್ಲಿ, ಹೋಟೆಲ್‌ನಲ್ಲಿ ನಡೆದ ಭಾರತೀಯ ಯುವ ಕಾಂಗ್ರೆಸ್ ಅಧಿವೇಶನದಲ್ಲಿ ಮತ್ತೊಬ್ಬ ಯುವ ಕಾಂಗ್ರೆಸ್ ನಾಯಕ ‘ನೀವು ವೋಡ್ಕಾ ಅಥವಾ ಟಕಿಲಾ ಕುಡಿಯುತ್ತೀರಾ ಎಂದು ಕೇಳಿದ್ದ ಎಂದು ದತ್ತಾ ಆರೋಪಿಸಿದ್ದಾರೆ.
ಆದರೆ ಈ ಎಲ್ಲ ಆರೋಪಗಳನ್ನು ಯುವ ಕಾಂಗ್ರೆಸ್ ನಿರಾಕರಿಸಿದೆ. “ಬಿವಿ ಶ್ರೀನಿವಾಸ್ ವಿರುದ್ಧ ಅಸಂಸದೀಯ, ಮಾನಹೀನ, ಮಾನಹಾನಿಕರ, ದುರುದ್ದೇಶಪೂರಿತ ಪದಗಳನ್ನು ಅಂಗಿತಾ ಬಳಸಿದ್ದಾರೆ ಮತ್ತು ಅವರ ವಿರುದ್ಧ ಸುಳ್ಳು, ಕ್ಷುಲ್ಲಕ ಆರೋಪಗಳನ್ನು ಮಾಡಿದ್ದಾರೆ. ಆದ್ದರಿಂದ ಬಿವಿ ಶ್ರೀನಿವಾಸ್ ಡಾ.ಅಂಕಿತಾ ದತ್ತಾ ಅವರಿಗೆ ಕ್ರಿಮಿನಲ್ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ” ಎಂದು ಪ್ರಕಟನೆಯಲ್ಲಿ ತಿಳಿಸಿದೆ.