Monday, July 7, 2025
Homeಟಾಪ್ ನ್ಯೂಸ್ಸಿಬಿಐ 56 ಪ್ರಶ್ನೆ ಕೇಳಿದೆ, ಪ್ರಕರಣವೇ ನಕಲಿ: ಕೇಜ್ರಿವಾಲ್

ಸಿಬಿಐ 56 ಪ್ರಶ್ನೆ ಕೇಳಿದೆ, ಪ್ರಕರಣವೇ ನಕಲಿ: ಕೇಜ್ರಿವಾಲ್

ನವದೆಹಲಿ: ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿ 9 ಗಂಟೆಗಳ ಕಾಲ ಸಿಬಿಐ ವಿಚಾರಣೆ ಎದುರಿಸಿದ ನಂತರ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ “ಈ ಪ್ರಕರಣವೇ ನಕಲಿ” ಎಂದಿದ್ದಾರೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಿಬಿಐ ನನಗೆ ಒಟ್ಟು 56 ಪ್ರಶ್ನೆಗಳನ್ನು ಕೇಳಿದೆ. ಎಲ್ಲವೂ ನಕಲಿ. ಪ್ರಕರಣವೇ ನಕಲಿ. ಅವರ ಬಳಿ ಒಂದೇ ಒಂದು ಪುರಾವೆಯೂ ಇಲ್ಲ ಎಂದು ನನಗೆ ಮನವರಿಕೆಯಾಗಿದೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.

2020ರಿಂದ ಮದ್ಯದ ನೀತಿ ಜಾರಿಗೆ ಬಂದ ವರ್ಷದಿಂದ ಅಂತ್ಯದವರೆಗೆ ಎಲ್ಲವನ್ನೂ ಸಿಬಿಐ ಕೇಳಿದೆ ಎಂದು ಕೇಜ್ರಿವಾಲ್ ಹೇಳಿದರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ದೆಹಲಿ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಹಂಚಿಕೊಳ್ಳುತ್ತೇನೆ ಎಂದರು.

ಹೆಚ್ಚಿನ ಸುದ್ದಿ