ಚಿಕ್ಕಮಗಳೂರು:ಕಾಂಗ್ರೆಸ್ ಅಭ್ಯರ್ಥೀಗಳ ನಾಲ್ಕನೇ ಪಟ್ಟಿ ಬಿಡುಗಡೆಯಾಗಿದೆ. ಬಿಜೆಪಿ ತೊರೆದು ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದ ನಗರಸಭೆ ಮಾಜಿ ಅಧ್ಯಕ್ಷ ಎಚ್ ಡಿ ತಮ್ಮಯ್ಯರಿಗೆ ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಿದೆ.
ಈ ಕ್ಷೇತ್ರದಲ್ಲಿ ಆರು ಮಂದಿ ಕಾಂಗ್ರೆಸ್ ಟಿಕೆಟ್ ಗೆ ಆಕಾಂಕ್ಷಿಗಳಾಗಿದ್ದರು. ಅಲ್ಲದೆ, ವಲಸಿಗ ತಮ್ಮಯ್ಯರಿಗೆ ಟಿಕೆಟ್ ನೀಡಬಾರದು ಎಂದು ಹಲವು ಸ್ಥಳೀಯ ಕಾಂಗ್ರೆಸಿಗರು ಆಗ್ರಹಿಸಿದ್ದರು.
ಸಿ.ಟಿ.ರವಿ ಆಪ್ತ ವಲಯದಲ್ಲಿದ್ದ ತಮ್ಮಯ್ಯ ಬಿಜೆಪಿಯಿಂದ ಕಾಂಗ್ರೆಸ್ ಗೆ ಜಿಗಿದಿದ್ದು, ಸಿಟಿ ರವಿ ವಿರುದ್ಧವೇ ಕಣಕ್ಕೆ ಇಳಿಯಲಿದ್ದಾರೆ.