ಮಂಡ್ಯ: ಈ ಬಾರಿ ಅಧಿಕಾರಕ್ಕೆ ಬರಲೇಬೇಕು ಎಂದು ಡಿ.ಕೆ ಶಿವಕುಮಾರ್ ನಿರ್ಧರಿಸಿದಂತೆ ಕಾಣುತ್ತಿದೆ. ಹೀಗಾಗಿಯೇ ಗೆಲುವಿನ ಮಾನದಂಡವನ್ನೊಂದು ಬಿಟ್ಟು ಬೇರೆಲ್ಲ ವಿಚಾರಗಳನ್ನೂ ಅವರು ಪಕ್ಕಕ್ಕಿಟ್ಟಂತಿದೆ. ಮದ್ದೂರು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಎಸ್.ಎಂ ಕೃಷ್ಣ ಸಹೋದರನ ಪುತ್ರ ಗುರುಚರಣ್‌ಗೆ ಟಿಕೆಟ್ ನಿರಾಕರಿಸಲಾಗಿದೆ.
ಮೂರನೇ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್ ಮದ್ದೂರು ಕ್ಷೇತ್ರದಲ್ಲಿ ಕದಲೂರು ಉದಯ್‌ಗೆ ಟಿಕೆಟ್ ನೀಡಿದೆ. ಈ ಕ್ಷೇತ್ರದಲ್ಲಿ ಗುರುಚರಣ್ ಡಿ.ಕೆ ಶಿವಕುಮಾರ್ ಬೀಗರಾದ ಎಸ್‌ಎಂ ಕೃಷ್ಣ ಸಂಬಂಧಿಯೆಂಬುದನ್ನು ಪಕ್ಕಕ್ಕಿಟ್ಟು ಉದಯ್ ಗೆ ಟಿಕೆಟ್ ನೀಡಲಾಗಿದೆ. ಗೆಲುವಿನ ಗುರಿಯೊಂದೇ ಮುಖ್ಯ ಎಂಬಂತಿದೆ ಡಿ.ಕೆ ಶಿವಕುಮಾರ್ ನಡೆ
