ಹುಬ್ಬಳ್ಳಿ: ಬಿಜೆಪಿ ಟಿಕೆಟ್ ನೀಡದಿದ್ದಕ್ಕೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಗೆ ಬಂದಿದ್ದಾರೆ. ಶೆಟ್ಟರ್ ಗೆ ಬಿಜೆಪಿ ನೀಡಲು ನಿರಾಕರಣೆ ಮಾಡಿರುವುದು, ಇಡೀ ಸಮುದಾಯಕ್ಕೆ ಮಾಡಿರುವ ಅವಮಾನವಾಗಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಮ್.ಬಿ.ಪಾಟೀಲ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಗೆ ಟಿಕೆಟ್ ನಿರಾಕರಿಸಿರೋದಕ್ಕೆ ಸಕಾರಣವಿಲ್ಲ. 75 ವರ್ಷ ವಯಸ್ಸಾದವರಿಗೂ ಬಿಜೆಪಿ ಟಿಕೆಟ್ ಕೊಟ್ಟಿದೆ. ಆದರೆ ಜನಸಂಘದಿಂದ ರಾಜಕಾರಣ ಆರಂಭ ಮಾಡಿದ ಶೆಟ್ಟರ್ ಅವರುಗೆ ಟಿಕೆಟ್ ನಿರಾಕರಿಸಿರೋದು ಸಮುದಾಯಕ್ಕೆ ಮಾಡಿದ ಅಪಮಾನ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಗೆ ಬಂದಿದ್ದಾರೆ. ಇದೊಂದು ಷಡ್ಯಂತ್ರ, ಯಡಿಯೂರಪ್ಪ ಅವರನ್ನು ಉಪಯೋಗಿಸಿಕೊಂಡು ನಡು ನೀರಲ್ಲಿ ಕೈಬಿಟ್ಟರು. ಲಕ್ಷ್ಮಣ ಸವದಿ ನಂತರ ಶೆಟ್ಟರ್ ಗೆ ಅನ್ಯಾಯ ಮಾಡಲಾಗಿದೆ. ಇದೊಂದು ದೊಡ್ಡ ಅಪಮಾನ ಮಾಡಲಾಗಿದೆ. ಲಿಂಗಾಯತ ಸಮಾಜದ ಮೇಲೆ ಬಿಜೆಪಿ ದ್ವೇಷ ಸಾಧನೆ ಮಾಡ್ತಿದೆ. ಯಡಿಯೂರಪ್ಪ, ಸವದಿ, ಶೆಟ್ಟರ್ ನಂತರದ ಪಾಳಿ ಬೊಮ್ಮಾಯಿ ಅವರದ್ದು. ಅವರನ್ನೂ ಮೂಲೆಗುಂಪು ಮಾಡೋದು ಖಚಿತ ಎಂದಿದ್ದಾರೆ.
ಇದನ್ನೇ ನಾನು ಮೂರು ಸಾವಿರ ಮಠದ ಶ್ರೀಗಳಿಗೆ ಹೇಳಿದ್ದೇನೆ. ಎಚ್.ಡಿ.ಕೆ ಹೇಳಿದಂತೆಯೇ ಬಿಜೆಪಿ ಬ್ರಾಹ್ಮಣರನ್ನು ಸಿಎಂ ಮಾಡಲು ಹೊರಟಿದೆ. ಲಿಂಗಾಯಿತ ಸಮುದಾಯದ ಪರವಾಗಿ ಮಾತನಾಡ್ತಿದ್ದೇನೆ. ನಾವು ಬ್ರಾಹ್ಮಣ ಸಮುದಾಯದ ವಿರೋಧಿಗಳಲ್ಲ. ಬ್ರಾಹ್ಮಣರು ಕೆಟ್ಟವರು ಅಂತ ಹೇಳಲ್ಲ. ಆದ್ರೆ ಕೆಲವರು ಕೆಟ್ಟದ್ದನ್ನು ಮಾಡಿದಾಗ ಮಾತನಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.