Tuesday, July 8, 2025
Homeಟಾಪ್ ನ್ಯೂಸ್ಕೆಪಿಸಿಸಿಯಲ್ಲಿ ಅಡುಗೆ ಸಿಲಿಂಡರ್‌ಗೆ ನಮನ: ಡಿ.ಕೆ.ಶಿ ಹೀಗ್ಯಾಕೆ ಮಾಡಿದ್ರು?

ಕೆಪಿಸಿಸಿಯಲ್ಲಿ ಅಡುಗೆ ಸಿಲಿಂಡರ್‌ಗೆ ನಮನ: ಡಿ.ಕೆ.ಶಿ ಹೀಗ್ಯಾಕೆ ಮಾಡಿದ್ರು?

ಬೆಂಗಳೂರು: ಇಂದು ಕೆಪಿಸಿಸಿ ಕಚೇರಿಯಲ್ಲಿ ರಾಜಾಜಿನಗರ ಕ್ಷೇತ್ರದ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದಿದ್ದು ಗ್ಯಾಸ್ ಸಿಲಿಂಡರ್

ಕಾರ್ಯಕ್ರಮಕ್ಕೂ ಮುನ್ನ ಡಿ.ಕೆ ಶಿವಕುಮಾರ್ ಅನಿಲ ಸಿಲಿಂಡರ್‌ಗೆ ಹಾರ ಹಾಕಿ ನಮಿಸಿದ್ರು. ಈ ಬಗ್ಗೆ ಮಾತನಾಡಿದ ಶಿವಕುಮಾರ್ 2014ರ ಲೋಕಸಭಾ ಚುನಾವಣೆ ಸಮಯದಲ್ಲಿ ಮೋದಿ ಅವರು ಮತದಾನ ಮಾಡುವ ಮುನ್ನ ಅಡುಗೆ ಅನಿಲ ಸಿಲಿಂಡರ್ ಗೆ ನಮಸ್ಕರಿಸಿ ಮತ ಹಾಕಿ ಎಂಬ ಸಂದೇಶ ನೀಡಿದ್ದರು. ಈ ಬಾರಿಯ ಚುನಾವಣೆಯಲ್ಲೂ ಅವರ ಮಾತಿನಂತೆ ನಾವು ನಮ್ಮ ಪಕ್ಷದ ಚುನಾವಣೆ ಪ್ರಚಾರ ಆರಂಭಿಸುವ ಮುನ್ನ ಅಡುಗೆ ಅನಿಲ ಸಿಲಿಂಡರ್ ಗೆ ನಮಿಸಲು ತೀರ್ಮಾನಿಸಿದ್ದೇವೆ ಎಂದು ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ವ್ಯಂಗ್ಯವಾಡಿದ್ರು.

2014ರ ಚುನಾವಣೆ ವೇಳೆ ಕಾಂಗ್ರೆಸ್ ಕಾಲದಲ್ಲಿ ಇದ್ದ ಅಡುಗೆ ಅನಿಲ ಬೆಲೆಯನ್ನು ಟೀಕಿಸಲು ಮೋದಿ ಸಿಲಿಂಡರ್‌ಗೆ ನಮಸ್ಕರಿಸಿ ಮತ ಹಾಕಿ ಎಂದು ಹೇಳಿದ್ರು. ಆದರೆ ಬಿಜೆಪಿ ಸರ್ಕಾರ ಬಂದ ನಂತರ ಪದೇ ಪದೇ ಸಿಲಿಂಡರ್ ಬೆಲೆ ಏರಿಸಿದ್ದಾರೆ. ಆದ್ದರಿಂದ ನಾವು ಮೋದಿಯವರ ಮಾತಿನಂತೆ ಸಿಲಿಂಡರ್‌ಗೆ ನಮಸ್ಕರಿಸಿ ನಮ್ಮ ಪ್ರಚಾರ ಕಾರ್ಯ ಹಾಗೂ ದಿನದ ಪಕ್ಷ ಚಟುವಟಿಕೆ ಕಾರ್ಯವನ್ನು ಆರಂಭಿಸುತ್ತೇವೆ ಎಂದು ವ್ಯಂಗ್ಯವಾಡಿದ್ರು. ಇದೇ ಪದ್ಧತಿಯನ್ನು ಬ್ಲಾಕ್ ಹಾಗೂ ಬೂತ್ ಮಟ್ಟದ ನಾಯಕರೂ ಪಾಲಿಸಬೇಕು ಎಂದು ಮನವಿ ಮಾಡುತ್ತೇನೆ. ಮತದಾರರು ಮತದಾನ ಮಾಡುವ ಮುನ್ನ ಇದೇ ರೀತಿ ನಮಿಸಿ ಮತದಾನ ಮಾಡಲಿ ಎಂದು ಜನತೆಗೆ ಕರೆ ಕೊಟ್ರು. ಈ ವೇಳೆ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿದ್ರು

ಹೆಚ್ಚಿನ ಸುದ್ದಿ