ವಾಟ್ಸಾಪ್ ಗ್ರೂಪಿನಲ್ಲಿ ರಾಜಕೀಯ ಪ್ರೇರಿತ ಹೇಳಿಕೆಯೊಂದನ್ನು ಹಂಚಿಕೊಂಡ ಕಾರಣಕ್ಕಾಗಿ, ಮಡಿಕೇರಿ ಕಾಂಗ್ರೆಸ್ ಮುಖಂಡ ವಿ.ಪಿ.ಶಶಿಧರ್ ಅವರಿಗೆ ಚುನಾವಣಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಗುರುವಾರ ಜಾರಿಗೊಳಿಸಿರುವ ನೋಟಿಸ್‍ನಲ್ಲಿ ವಾಟ್ಸಪ್ ಮೂಲಕ ಪ್ರಚಾರ ನಡೆಸುವುದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ ಎಂದು ಉಲ್ಲೇಖಿಸಲಾಗಿದೆ.
ಮಾ. 29 ರಿಂದ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆಯಲ್ಲಿರುವ ಪ್ರಕಾರ, ಪತ್ರಿಕೆ, ಮಾಧ್ಯಮ, ಸಾಮಾಜಿಕ ಜಾಲತಾಣ ಹಾಗೂ ಇನ್ನಿತರ ಯಾವುದೇ ಮೂಲಗಳಿಂದ ರಾಜಕೀಯ ಪ್ರಚಾರ ಮಾಡಬೇಕಾದಲ್ಲಿಮತ್ತು ರಾಜಕೀಯ ಪ್ರೇರಿತ ಹೇಳಿಕೆ ನೀಡಬೇಕಾದಲ್ಲಿ ಜಿಲ್ಲಾ ನಿಯೋಗದ ಬಳಿ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ನೋಟಿಸ್‍ನಲ್ಲಿ ಹೇಳಿರುವ ಚುನಾವಣಾ ಆಯೋಗ, ವಿ.ಪಿ ಶಶಿಧರ್ ಅವರು ಅಡ್ಮಿನ್ ಆಗಿರುವ “ನಮ್ಮ ಕುಶಾಲನಗರ” ಎಂಬ ವಾಟ್ಸಪ್ ಗ್ರೂಪ್‍ನಲ್ಲಿ ರಾಜಕೀಯ ಸಂದೇಶ ಹಂಚಿದ್ದಕ್ಕೆ ಸ್ಪಷ್ಟೀಕರಣ ನೀಡುವಂತೆ ಆದೇಶಿಸಿದೆ.