Tuesday, July 8, 2025
Homeಚುನಾವಣೆ 2023ಚುನಾವಣೆ ನೀತಿ ಸಂಹಿತೆ ಜಾರಿ: ಎಷ್ಟು ನಗದು, ಉಡುಗೊರೆ ಒಯ್ಯಬಹುದು?

ಚುನಾವಣೆ ನೀತಿ ಸಂಹಿತೆ ಜಾರಿ: ಎಷ್ಟು ನಗದು, ಉಡುಗೊರೆ ಒಯ್ಯಬಹುದು?

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯದ ಹಿನ್ನೆಲೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ನೀತಿ ಸಂಹಿತೆ ಜಾರಿಯಾದ ನಂತರ ಕೇವಲ ಒಂದು ವಾರದಲ್ಲಿ ಬರೋಬ್ಬರಿ 69.3 ಕೋಟಿ ಮೌಲ್ಯದ ಸ್ವತ್ತು, ನಗದನ್ನು ಅಧಿಕಾರಿಗಳು ಹಾಗೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಜ್ಯ ವಿವಿಧ ಕಡೆಗಳಲ್ಲಿ, ಗಡಿ ಪ್ರದೇಶಗಳಲ್ಲಿ ಚೆಕ್​ ಪೋಸ್ಟ್​​ಗಳನ್ನು ತೆರೆಯಲಾಗಿದ್ದು, ದಾಖಲೆ ಇಲ್ಲದೆ ಸಾಗಿಸುವ ನಗದು, ಆಭರಣ ಹಾಗೂ ಇತರ ವಸ್ತುಗಳನ್ನು ಜಪ್ತಿ ಮಾಡಲಾಗುತ್ತಿದೆ. ಹಾಗಿದ್ದರೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಈ ವೇಳೆ ಎಷ್ಟು ನಗದು ಕೊಂಡೊಯ್ಯಬಹುದು? ಎಷ್ಟು ಮೌಲ್ಯದ ಉಡುಗೊರೆಗಳನ್ನು ಒಯ್ಯಬಹುದೆಂಬ ಮಾಹಿತಿ ಇಲ್ಲಿದೆ.

ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮಾರ್ಗಸೂಚಿ ಪ್ರಕಾರ, ಯಾರೇ ಆದರೂ 50,000 ರೂ.ವರೆಗಿನ ನಗದು ಅಥವಾ ಉಡುಗೊರೆ ಸಾಮಗ್ರಿಗಳನ್ನು ಕೊಂಡೊಯ್ಯಬಹುದಾಗಿದೆ. ಇದಕ್ಕೆ ಯಾವುದೇ ದಾಖಲೆಗಳನ್ನು ಹೊಂದಿರುವ ಅಗತ್ಯವಿಲ್ಲ. ಆದರೆ, 50,000 ರೂ. ಮೇಲ್ಪಟ್ಟ ನಗದು ಅಥವಾ 10,000 ರೂ.ಗಿಂತ ಹೆಚ್ಚಿನ ಮೌಲ್ಯದ ಉಡುಗೊರೆ ವಸ್ತುಗಳನ್ನು ಕೊಂಡೊಯ್ಯುವುದಾದರೆ ಅದಕ್ಕೆ ಸೂಕ್ತ ದಾಖಲೆಗಳು ಬಳಿ ಇರಬೇಕು.
50,000 ರೂ. ಮೇಲ್ಪಟ್ಟ ನಗದನ್ನು ಕೊಂಡೊಯ್ಯುವುದಾದರೆ ಅದಕ್ಕೆ ದಾಖಲೆ ನೀಡಬೇಕಾಗುತ್ತದೆ. ಪಾಸ್‌ಬುಕ್‌ಗಳನ್ನು ಪುರಾವೆಯಾಗಿ ಇಟ್ಟುಕೊಳ್ಳಬೇಕು. ಖಾಸಗಿ ವ್ಯಕ್ತಿಗಳು ಮತ್ತು ಉದ್ಯಮಿಗಳು ವ್ಯಾಪಾರದ ದಾಖಲೆಗಳು ಮಾತ್ರವಲ್ಲದೆ ಸಾಗಾಟಕ್ಕೆ ಅನುಮತಿ ಪಡೆದ ಪ್ರಮಾಣಪತ್ರವನ್ನು ಹೊಂದಿರಬೇಕು. ನಿಗದಿತ ಮಿತಿಗಿಂತ ಹೆಚ್ಚಿನ ಹಣವನ್ನು ಸಾಗಿಸುವ ಯಾರೇ ಆದರೂ ಅದರ ಮೂಲ ಮತ್ತು ಎಲ್ಲಿಗೆ ಸಾಗಿಸಲಾಗುತ್ತಿದೆ, ಯಾಕೆ ಕೊಂಡೊಯ್ಯಲಾಗುತ್ತದೆ ಎಂಬುದನ್ನು ವಿವರಿಸಬೇಕಾಗುತ್ತದೆ.

ಹೆಚ್ಚಿನ ಸುದ್ದಿ