Monday, July 7, 2025
Homeಬೆಂಗಳೂರುಪೊಲೀಸ್ ಠಾಣಾ ಆವರಣದಲ್ಲೇ ಬೆಂಕಿ ಅನಾಹುತ

ಪೊಲೀಸ್ ಠಾಣಾ ಆವರಣದಲ್ಲೇ ಬೆಂಕಿ ಅನಾಹುತ

ಬೆಂಗಳೂರು: ಆವಲಹಳ್ಳಿ ಪೊಲೀಸ್ ಠಾಣೆಯ ಆವರಣದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಗುರುವಾರ ಮಧ್ಯಾಹ್ನ ನಡೆದ ಘಟನೆಯಲ್ಲಿ ಪೊಲೀಸ್ ಸ್ಟೇಷನ್ ಆವರಣದಲ್ಲಿ ನಿಲ್ಲಿಸಿದ್ದ ನೂರಕ್ಕೂ ಹೆಚ್ಚು ವಾಹನಗಳು ಬೆಂಕಿಗೆ ಆಹುತಿಯಾಗಿದೆ.
ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿಕೊಂಡಿದ್ದ ವಾಹನಗಳನ್ನು ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಲಾಗಿತ್ತು. ಗುರುವಾರ ಏಕಾಏಕಿ ಬೆಂಕಿ ತಗುಲಿದ ಪರಿಣಾಮ ನೂರಕ್ಕೂ ಹೆಚ್ಚು ವಾಹನಗಳು ಹೊತ್ತು ಉರಿದಿವೆ. ಪೊಲೀಸ್ ಠಾಣೆಯ ಪಕ್ಕದಲ್ಲಿದ್ದ ಖಾಲಿ ಜಾಗದಿಂದ ಬೆಂಕಿ ತಗುಲಿರಬಹುದೆಂದು ಊಹಿಸಲಾಗಿದ್ದು, ಬೆಂಕಿಯ ತೀವ್ರತೆಗೆ ಹಲವು ವಾಹನಗಳು ಸಂಪೂರ್ಣ ಬೂಧಿಯಾಗಿವೆ. ಸ್ಥಳಕ್ಕೆ ಆಗಮಿಸಿದ ಮೂರು ಅಗ್ನಿಶಾಮಕ ದಳದ ವಾಹನಗಳು ಸಿಬ್ಬಂದಿಗಳೊಡನೆ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ.

ಹೆಚ್ಚಿನ ಸುದ್ದಿ