Saturday, April 25, 2026
Homeದೇಶಸೇನೆಯ ಸ್ಟೇಶನ್ ನಲ್ಲಿ ಗುಂಡಿನ ದಾಳಿ: 4 ಸೈನಿಕರು ಮೃತ್ಯು

ಸೇನೆಯ ಸ್ಟೇಶನ್ ನಲ್ಲಿ ಗುಂಡಿನ ದಾಳಿ: 4 ಸೈನಿಕರು ಮೃತ್ಯು

ಪಂಜಾಬ್: ಪಂಜಾಬ್ ನ ಬಟಿಂಡ ಮಿಲಿಟರಿ ಸ್ಟೇಶನ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸೈನಿಕರು ಮೃತಪಟ್ಟಿರುವಂತಹ ಘಟನೆ ನಡೆದಿದೆ.

ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು ಕಟ್ಟೆಚ್ಚರ ವಹಿಸಲಾಗಿದೆ. ಎರಡು ದಿನಗಳ ಹಿಂದಷ್ಟೇ ಇಲ್ಲಿಂದ ರೈಫಲ್ ಗಳು ಮತ್ತು 28 ಗುಂಡುಗಳು ನಾಪತ್ತೆಯಾಗಿದ್ದವು. ಇದನ್ನೇ ಈ ದಾಳಿಗೆ ಬಳಸಿರಬಹುದು ಎನ್ನುವ ಸಂಶಯ ವ್ಯಕ್ತವಾಗಿದೆ.

ಈ ದಾಳಿ ನಡೆಸಿದವರು ಯಾರು?, ಇದರ ಹಿಂದಿರುವವರು ಯಾರು ಎನ್ನುವ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಹೆಚ್ಚಿನ ಸುದ್ದಿ