Thursday, June 25, 2026
Homeಚುನಾವಣೆ 2023ಬಿಜೆಪಿ ಟಿಕೆಟ್‌ ಮಿಸ್‌ : ಜನಾರ್ದನ ರೆಡ್ಡಿ ಭೇಟಿಯಾದ ಗೂಳಿಹಟ್ಟಿ ಶೇಖರ್‌

ಬಿಜೆಪಿ ಟಿಕೆಟ್‌ ಮಿಸ್‌ : ಜನಾರ್ದನ ರೆಡ್ಡಿ ಭೇಟಿಯಾದ ಗೂಳಿಹಟ್ಟಿ ಶೇಖರ್‌

ಚಿತ್ರದುರ್ಗ: ಕರ್ನಾಟಕ ಚುನಾವಣೆಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, 189 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಹಲವು ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಆಗಿದ್ದು ಎಲ್ಲರೂ ಬೇರೆ ಬೇರೆ ಪಕ್ಷಗಳತ್ತ ಮುಖ ಮಾಡುವ ಯೋಚನೆಯಲ್ಲಿದ್ದಾರೆ.

ಹಾಲಿ ಶಾಸಕ ಗೂಳಿಹಟ್ಟಿ ಶೇಖರ್‌ ಅವರಿಗೆ ಹೊಸದುರ್ಗದಿಂದ ಟಿಕೆಟ್‌ ನಿರಾಕರಿಸಲಾಗಿದ್ದು, ಶೇಖರ್‌ ಜನಾರ್ದನ ರೆಡ್ಡಿ ಅವರನ್ನು ಭೇಟಿಯಾಗಿದ್ದಾರೆ. ಇಬ್ಬರೂ ನಾಯಕರ ಭೇಟಿ ಭಾರೀ ಕುತೂಹಲ ಕೆರಳಿಸಿದ್ದು, ಗೂಳಿಹಟ್ಟಿ ಶೇಖರ್‌ ಕೆಆರ್‌ಪಿಪಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

 ಬಿಜೆಪಿಯಲ್ಲಿ ಹೊಸದುರ್ಗ ಕ್ಷೇತ್ರದಿಂದ ಸ್ಪರ್ಧಿಸಲು ಎಸ್ ಲಿಂಗಮೂರ್ತಿ ಹಾಗೂ ಗೂಳಿಹಟ್ಟಿ ಶೇಖರ್‌ ಅವರ ನಡುವೆ ತೀವ್ರ ಪೈಪೋಟಿ ಇತ್ತು. ಆದರೆ, ಹೈಕಮಾಂಡ್‌ ಲಿಂಗಮೂರ್ತಿಯವರಿಗೆ ಅವಕಾಶ ನೀಡಿದ್ದು, ಇದರಿಂದ ಅಸಮಾಧಾನಗೊಂಡಿರುವ ಗೂಳಿಹಟ್ಟಿ ಶೇಖರ್‌ ಬಿಜೆಪಿ ಬಿಟ್ಟು ಜನಾರ್ಧನರೆಡ್ಡಿಯ ಕೆಆರ್‌ಪಿಪಿ ಪಕ್ಷ ಸೇರುವ ಸಾಧ್ಯತೆ ಇದೆ ಎನ್ನಲಾಗ್ತಿದೆ

ಹೆಚ್ಚಿನ ಸುದ್ದಿ