Monday, July 7, 2025
Homeಚುನಾವಣೆ 2023ನನ್ನ ಪತ್ನಿಗೆ ಟಿಕೆಟ್ ಇಲ್ಲ ಇಲ್ಲಾಂದ್ರೆ ನನಗೂ ಬೇಡ: ಹೆಚ್‌.ಡಿ. ರೇವಣ್ಣ

ನನ್ನ ಪತ್ನಿಗೆ ಟಿಕೆಟ್ ಇಲ್ಲ ಇಲ್ಲಾಂದ್ರೆ ನನಗೂ ಬೇಡ: ಹೆಚ್‌.ಡಿ. ರೇವಣ್ಣ

ಹಾಸನ: ಜೆಡಿಎಸ್‌ಗೆ ಹಾಸನ ಕ್ಷೇತ್ರದ ಟಿಕೆಟ್‌ ತಲೆಬಿಸಿ ಹೆಚ್ಚಾಗಿದೆ. ಭವಾನಿಗೆ ಹಾಸನ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ನೀಡದಿದ್ದರೆ, ಹೊಳೆನರಸೀಪುರದಿಂದ ನನಗೂ ಟಿಕೆಟ್‌ ಬೇಡ ಎಂದು ಶಾಸಕ ಎಚ್‌.ಡಿ. ರೇವಣ್ಣ ಜೆಡಿಎಸ್‌ಗೆ ಹೊಸ ತಲೆನೋವು ತಂದಿದ್ದಾರೆ.

ಏಪ್ರಿಲ್ 7ರ ರಾತ್ರಿ ಆಪ್ತರೊಡನೆ ಸಮಾಲೋಚನೆ ಮಾಡುವ ವೇಳೆ, ಹಾಸನ ಟಿಕೆಟ್ ಗೊಂದಲ ಕಗ್ಗಂಟಾಗಿರುವ ಬಗ್ಗೆ ರೇವಣ್ಣ ತೀವ್ರ ಬೇಸರ ಪಟ್ಟುಕೊಂಡಿದ್ದಾರೆ ಎನ್ನಲಾಗಿದ್ದು, ಹಾಸನದಲ್ಲಿ ಭವಾನಿಯವರಿಗೆ ಟಿಕೆಟ್ ಕೊಡಬೇಕು ಎಂದು ನಾನು ಪಟ್ಟು ಹಿಡಿದು ಕೇಳುವಂಥ ಪರಿಸ್ಥಿತಿ ಬಂದೊಂದಗಿದೆ. ಒಂದು ವೇಳೆ, ಹಾಸನದಲ್ಲಿ ಭವಾನಿಯವರಿಗೆ ಟಿಕೆಟ್ ನೀಡದೇ ಹೋದರೆ, ನನಗೂ ಟಿಕೆಟ್ ಬೇಡ. ನಾನೂ ಸಹ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಹಾಸನ ಕ್ಷೇತ್ರದಲ್ಲಿ ಬಿಜೆಪಿ ಮಣಿಸಲು ಪ್ರಬಲ ಅಭ್ಯರ್ಥಿ ಅಗತ್ಯವಿರೋದ್ರಿಂದ ಭವಾನಿಗೆ ಟಿಕೆಟ್ ನೀಡಬೇಕು ಇಲ್ಲವಾದ್ರೆ ಪಕ್ಷ ಸೋಲುವುದು ನಿಶ್ಚಿತ ಎಂದಿರುವ ಅವರು ಕ್ಷೇತ್ರ ಕೈತಪ್ಪಿದರೆ, ಕಾರ್ಯಕರ್ತರು ಕಂಗೆಡುತ್ತಾರೆ ಎಂದು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ಕ್ಷೇತ್ರವನ್ನು ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಹೊಳೆನರಸೀಪುರದಲ್ಲಿ ಗೆದ್ದು ಏನು ಮಾಡುವುದು? ನನಗೂ ಅಲ್ಲಿನ ಟಿಕೆಟ್ ಬೇಡ. ಈ ಬಗ್ಗೆ ದೇವೇಗೌಡರಿಗೆ ಸಂದೇಶ ರವಾನಿಸುವೆ ಎಂದು ಮುಖಂಡರಿಗೆ ರೇವಣ್ಣ ತಿಳಿಸಿದ್ದಾರೆ. ಈ ಕುರಿತು ದೇವೇಗೌಡರೂ ರೇವಣ್ಣ ಜೊತೆಗೆ ಚರ್ಚಿಸಿದ್ದು, ಗೊಂದಲಕ್ಕೆ ಅವಕಾಶ ನೀಡದೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ

ಹೆಚ್ಚಿನ ಸುದ್ದಿ