Tuesday, July 8, 2025
Homeಟಾಪ್ ನ್ಯೂಸ್ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗೆ ಹೃದಯಾಘಾತ

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗೆ ಹೃದಯಾಘಾತ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿರುವ ಮಾಜಿ ಶಾಸಕ ವೆಂಕಟಸ್ವಾಮಿ ಅವರಿಗೆ ಬುಧವಾರ ಹೃದಯಾಘಾತವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಮಾಡ್ತಿದ್ದ ವೆಂಕಟಸ್ವಾಮಿ, ಮಂಗಳವಾರ ಪ್ರಚಾರ ಕಾರ್ಯ ಮುಗಿಸಿ ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದಾಗ ಹೃದಯಾಘಾತವಾಗಿದೆ ಎಂದು ವರದಿಯಾಗಿದೆ.

2008ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕನಾಗಿ ಆಯ್ಕೆಯಾಗಿದ್ದ ವೆಂಕಟಸ್ವಾಮಿ  2013 ರಲ್ಲಿ ಮತ್ತು 2018 ರಲ್ಲಿ ಸೋಲು ಅನುಭವಿಸಿದ್ದರು. ಈ ಬಾರಿಯ ಚುನಾವಣೆಗೂ ಕಾಂಗ್ರೆಸ್ ಟಿಕೆಟ್ ಗಾಗಿ ಕಸರತ್ತು ನಡೆಸುತ್ತಿದ್ದರು.

  ಈಗಾಗಲೆ ಕ್ಷೇತ್ರದಲ್ಲಿ ಬೂತ್ ಮಟ್ಟದಲ್ಲಿ ಒಂದು ಹಂತದ ಪ್ರಚಾರ ಮುಗಿಸಿರುವ ವೆಂಕಟಸ್ವಾಮಿ ಎರಡನೆ ಹಂತದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಈ ನಡುವೆ ಗ್ರಾಮಗಳಲ್ಲಿ ಪ್ರಚಾರ ಮುಗಿಸಿ ಮನೆಗೆ ಬಂದ ವೇಳೆ ಹೃದಯಾಘಾತವಾಗಿದ್ದು ಕುಟುಂಬಸ್ಥರು ಕೂಡಲೆ ಬೆಂಗಳೂರಿನ ಆಸ್ವತ್ರೆಗೆ ಕರೆದು ತಂದು ಚಿಕಿತ್ಸೆ ಕೊಡಿಸಿದ್ದಾರೆ.

ವೆಂಕಟಸ್ವಾಮಿ ಅವರಿಗೆ ಚಿಕಿತ್ಸೆ ‌ನೀಡಿರುವ ವೈದ್ಯರು ಯಾವುದೇ ಅಪಾಯವಿಲ್ಲ ವೆಂದು ಹೇಳಿದ್ದು, ಸ್ಟಂಟ್‌ ಹಾಕಿಸುವಂತೆ ಕುಟುಂಬಸ್ಥರಿಗೆ ಸಲಹೆ ನೀಡಿದ್ದಾರೆ.  

ಹೆಚ್ಚಿನ ಸುದ್ದಿ