Tuesday, July 8, 2025
Homeಚುನಾವಣೆ 2023ಹೂಡಿ ವಿಜಯ್‌ ಕುಮಾರ್‌ ಬಂಡಾಯ:‌ ಮೋದಿ ಫೋಟೋ ಕಿತ್ತೆಸೆದ ಅಭಿಮಾನಿಗಳು

ಹೂಡಿ ವಿಜಯ್‌ ಕುಮಾರ್‌ ಬಂಡಾಯ:‌ ಮೋದಿ ಫೋಟೋ ಕಿತ್ತೆಸೆದ ಅಭಿಮಾನಿಗಳು

ಬಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ರಾಜ್ಯಾದ್ಯಂತ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿವೆ. ಭಿನ್ನಮತದ ಬಿಸಿ ಕೋಲಾರಕ್ಕೂ ತಲುಪಿದ್ದು, ಮಾಲೂರಿನ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಹೂಡಿ ವಿಜಯಕುಮಾರ್‌ ಹೂಡಿ ವಿಜಯ್ ಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಟಿಕೆಟ್‌ ನೀಡದ ಕೋಪಕ್ಕೆ ವಿಜಯ್‌ ಕುಮಾರ್ ಬೆಂಬಲಿಗರು ತಮ್ಮ ಕಚೇರಿಗಳಲ್ಲಿ ಹಾಕಿದ್ದ ಮೋದಿ ಫೋಟೊ ಕಿತ್ತು ಹಾಕಿದ್ದು, ಬಿಜೆಪಿಯ ವಿವಿಧ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದಾರೆ. ಮಾಜಿ ಶಾಸಕರಾದ ಕೆ.ಎಸ್ ಮಂಜುನಾಥ್ ಗೌಡರು ಇತ್ತೀಚೆಗೆ ಜೆಡಿಎಸ್‌ ತೊರೆದು ಬಿಜೆಪಿ ಸೇರಿ ಟಿಕೆಟ್ ಪಡೆದಿದ್ದಾರೆ. ಇದು ಮೂಲ ಬಿಜೆಪಿಗರ ರೊಚ್ಚಿಗೆ ಕಾರಣವಾಗಿದೆ.

ನಾಲ್ಕು ವರ್ಷದಿಂದ ಸಮಾಜ ಸೇವೆ ಮಾಡಿದ್ದೇನೆ. ಬಿಜೆಪಿ ಪಕ್ಷ ಕಟ್ಟಿದ್ದೇನೆ. ಆದರೆ ಪಕ್ಷದ ಮುಖಂಡರೆ ನನಗೆ ಟಿಕೆಟ್ ತಪ್ಪಿಸಿ ಜೆಡಿಎಸ್‌ನಿಂದ ಬಂದವರಿಗೆ ಟಿಕೆಟ್ ನೀಡಿದ್ದಾರೆ. ಇದರಿಂದ ನೋವಾಗಿದೆ, ಕಾರ್ಯಕರ್ತರ ಮಾತಿಗೆ ಬೆಲೆ ಕೊಟ್ಟು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ. ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಹೂಡಿ ವಿಜಯ್ ಕುಮಾರ್ ಬಂಡಾಯ ಘೋಷಿಸಿದ್ದಾರೆ.

ಬೆಂಬಲಿಗರ ಸಭೆ ಮುಗಿದ ಕೂಡಲೇ ಸಿಟ್ಟಿಗೆದ್ದ ವಿಜಯ್ ಕುಮಾರ್ ಬೆಂಬಲಿಗರು ತಮ್ಮ ಮನೆಗಳಲ್ಲಿ ಹಾಕಿದ್ದ ಮೋದಿ ಫೋಟೊ ಕಿತ್ತು ಎಸೆದಿದ್ದಾರೆ. ಬಿಜೆಪಿ ಬಾವುಟಗಳನ್ನು ನಾಶಪಡಿಸಿದ್ದಾರೆ.

ಹೆಚ್ಚಿನ ಸುದ್ದಿ