ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಶಿರಸಿಯ ಸ್ಪೀಕರ್ ಕಾಗೇರಿ ಅವರ ನಿವಾಸಕ್ಕೆ ತೆರಳಿ ರಾಜಿನಾಮೆ ಸಲ್ಲಿಸಿದ್ರು.
ರಾಜಿನಾಮೆ ಬಳಿಕ ಮಾತನಾಡಿದ ಜಗದೀಶ್ ಶೆಟ್ಟರ್, ನಾನು ಶಾಸಕ ಸ್ಥಾನಕ್ಕೆ ಬೇಸರದಿಂದ ರಾಜಿನಾಮೆ ನೀಡಿದ್ದೇನೆ. ಅಧಿಕಾರಕ್ಕಾಗಿ ನಾನು ರಾಜಕಾರಣಕ್ಕೆ ಬಂದಿಲ್ಲ. ಶಾಸಕನಾಗಿ ಮುಂದುವರಿಯಲು ನನಗೆ ಇಚ್ಛೆ ಇದೆ. ಜನಸೇವೆ ಮಾಡುವ ಕಾರ್ಯ ಮುಂದುವರೆಸಬೇಕಿದೆ. ಆದರೆ ಬಿಜೆಪಿ ನಾಯಕರ ನಡೆ ನನಗೆ ಇಷ್ಟವಾಗಲಿಲ್ಲ.. ಹೀಗಾಗಿ ಪಕ್ಷಕ್ಕೆ ವಿದಾಯ ಹೇಳುತ್ತಿದ್ದೇನೆ ಎಂದ್ರು
ಈ ನಡುವೆ ಶೆಟ್ಟರ್‌ಗೆ ಬಿಜೆಪಿ ಏನು ಅನ್ಯಾಯ ಮಾಡಿದೆ ಎಂದು ಪ್ರಶ್ನಿಸಿದ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪರವರ ಮಾತಿಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪಗೂ ಬಿಜೆಪಿ ಎಲ್ಲವನ್ನೂ ಕೊಟ್ಟಿತ್ತು ಆದರೆ ಅವರು ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದೇಕೆ ಎಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ರು.
ಅದಲ್ಲದೇ ಯಾವುದೇ ಹಗರಣ ಇಲ್ಲದೇ ಕಳಂಕರಹಿತ ರಾಜಕಾರಣ ಮಾಡುತ್ತಾ ಬಂದಿದ್ದೇನೆ. ನನ್ನ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ.. ಯಾವುದೇ ಸಿಡಿಗಳಿಲ್ಲ ಆದರೂ ನನಗೆ ಟಿಕೆಟ್ ನೀಡದೇ ಇದ್ದದ್ದು ಸರಿಯೇ ಎಂದು ಪ್ರಶ್ನಿಸಿದ ಶೆಟ್ಟರ್ ತಮ್ಮ ಮುಂದಿನ ನಡೆ ಬಗ್ಗೆ ಹುಬ್ಬಳ್ಳಿಗೆ ತೆರಳಿದ ನಂತರ ತೀರ್ಮಾನಿಸೋದಾಗಿ ಹೇಳಿದ್ರು
