Monday, July 7, 2025
Homeಚುನಾವಣೆ 2023ಸುದೀಪ್‌ ನಟಿಸಿರುವ ಜಾಹೀರಾತು, ಪೋಸ್ಟರ್‌ಗಳಿಗೆ ನಿರ್ಬಂಧ ವಿಧಿಸಲು ಜೆಡಿಎಸ್‌ ಮನವಿ

ಸುದೀಪ್‌ ನಟಿಸಿರುವ ಜಾಹೀರಾತು, ಪೋಸ್ಟರ್‌ಗಳಿಗೆ ನಿರ್ಬಂಧ ವಿಧಿಸಲು ಜೆಡಿಎಸ್‌ ಮನವಿ

ಬಿಜೆಪಿ ಸ್ಟಾರ್‌ ಪ್ರಚಾರಕ ಸುದೀಪ್‌ ಅವರು ನಟಿಸಿರುವ ಜಾಹೀರಾತು, ಪೋಸ್ಟರ್ ಮತ್ತು ಪುಚಾರ ಕಾರ್ಯಕ್ರಮಗಳನ್ನು ಚುನಾವಣೆ ಮುಗಿಯುವವರೆಗೆ ತಡೆ ಹಿಡಿಯಬೇಕೆಂದು ಜೆಡಿಎಸ್‌ ಚುನಾವಣಾ ಆಯೋಗದ ಮೊರೆ ಹೋಗಿದೆ.

 ಚಲನಚಿತ್ರ ನಟರಾದ ಕಿಚ್ಚ ಸುದೀಪ್‌ರವರು, ಪ್ರಸ್ತುತ ಬಿಜೆಪಿ ಪಕ್ಷದ ಸ್ಮಾರ್’ ಪುಚಾರಕರಾಗಿರುವುದರಿಂದ ಇವರು ನಟಿಸಿರುವ ಜಾಹೀರಾತು, ಪೋಸ್ಟರ್ ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ಚುನಾವಣೆ ಮುಗಿಯುವವರೆಗೆ ಟಿವಿ ಮತ್ತು ಮಾಧ್ಯಮಗಳಲ್ಲಿ ಪುಸಾರವಾಗದಂತೆ ತಡೆಹಿಡಿಯಬೇಕು, ಇವರ ಭಾವಚಿತ್ರವಿರುವ ಪೋಸ್ಟರ್‌, ಜಾಹೀರಾತುಗಳನ್ನು ಈ ಕೂಡಲೇ ತೆರವುಗೊಳಿಸಿ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್‌ ವಕ್ತಾರ ಹಾಗೂ ಕಾನೂನು ಘಟಕದ ಕಾರ್ಯದರ್ಶಿ ಪ್ರದೀಪ್‌ ಕುಮಾರ್‌ ಅವರು ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದಾರೆ.

ಈ ಹಿಂದೆ ಶಿವಮೊಗ್ಗದ ವಕೀಲರೊಬ್ಬರು ಇದೇ ಕಾರಣ ಇಟ್ಟುಕೊಂಡು, ಸುದೀಪ್‌ ಚಿತ್ರ, ಜಾಹಿರಾತುಗಳಿಗೆ ತಡೆ ನೀಡಬೇಕೆಂದು ಕೋರಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು.

ಹೆಚ್ಚಿನ ಸುದ್ದಿ