ವೀರಭದ್ರ ಸ್ವಾಮಿಯ ಅಗ್ನಿಕೊಂಡೋತ್ಸವ ವೇಳೆ ಅಯತಪ್ಪಿ ಅರ್ಚಕನೇ ಅಗ್ನಿ ಕೊಂಡಕ್ಕೆ ಬಿದ್ದ ಘಟನೆ ಕನಕಪುರದ ನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಕ್ಷಣ ಗಾಯಾಳು ಪುಟ್ಟಸ್ವಾಮಿಯನ್ನು ಮೇಲೆತ್ತಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ದುರ್ಘಟನೆಯಿಂದ ನೆರೆದಿದ್ದ ಸಾವಿರಾರು ಭಕ್ತರು ಆತಂಕ್ಕೀಡಾಗಿದ್ದಾರೆ. ಹಲವು ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬರುತ್ತಿದ್ದು, ಇದೇ ಮೊದಲ ಬಾರಿಗೆ ಕೊಂಡೋತ್ಸವದ ವೇಳೆ ಇಂತಹ ಆಚಾತುರ್ಯ ನಡೆದಿರುವುದು ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಘಟನೆಯಲ್ಲಿ ಅರ್ಚಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.