Tuesday, July 8, 2025
Homeಚುನಾವಣೆ 2023ನಾಮಪತ್ರ ಸಲ್ಲಿಸಿದ ಲಕ್ಷ್ಮಣ್ ಸವದಿ

ನಾಮಪತ್ರ ಸಲ್ಲಿಸಿದ ಲಕ್ಷ್ಮಣ್ ಸವದಿ

ಬೆಳಗಾವಿ : ಬಿಜೆಪಿ ಟಿಕೆಟ್ ಕೊಡದ ಕಾರಣಕ್ಕೆ ಸಿಡಿದು ಕಾಂಗ್ರೆಸ್ ಸೇರಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಂಗಳವಾರ ಅಥಣಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಹಲವು ದೇಗುಲಗಳಿಗೆ, ಶಿವಯೋಗಿಗಳ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸವದಿ, ಬಳಿಕ ತಮ್ಮ ಆಪ್ತರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ಟಿಕೆಟ್ ಆಕಾಂಕ್ಷಿತರಾಗಿದ್ದ ಲಕ್ಷ್ಮಣ್ ಸವದಿಗೆ ರಮೇಶ್ ಜಾರಕಿಹೊಳಿ ಬಣ ಸರಿಯಾದ ಆಘಾತ ನೀಡಿತ್ತು. ಅಥಣಿ ಕ್ಷೇತ್ರದಿಂದ ರಮೇಶ್ ಜಾರಕಿಹೊಳಿ ಆಪ್ತ ಮಹೇಶ್ ಕುಮಟಳ್ಳಿಗೆ ಟಿಕೆಟ್ ದೊರಕಿತ್ತು. ಇದರಿಂದ ಸ್ಫೋಟಗೊಂಡಿದ್ದ ಸವದಿ, ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿ ಅಥಣಿ ಕ್ಷೇತ್ರದಿಂದ ಟಿಕೆಟ್ ಪಡೆದು ಸ್ಪರ್ಧಿಸುತ್ತಿದ್ದಾರೆ.

ಪೀಡೆ ತೊಲಗಿದಂತಾಯ್ತು ಎಂದು ರಮೇಶ್ ಜಾರಕಿಹೊಳಿ ಸವದಿ ಬಗ್ಗೆ ಹೇಳಿದ್ದರೆ, ಬೆಳವು ಹೊಕ್ಕ ಮನೆ ಅಳಿವು ಎಂಬಂತೆ ಬಿಜೆಪಿ ರಮೇಶ್ ಜಾರಕಿಹೊಳಿಯಿಂದ ನಾಶವಾಗಲಿದೆ ಎಂದು ಸವದಿ ತಿರುಗೇಟು ನೀಡಿದ್ದರು. ಈಗ ಅಥಣಿ ಕ್ಷೇತ್ರ ಇವರಿಬ್ಬರ ನಡುವಿನ ಪ್ರತಿಷ್ಠೆಯ ಕಣವಾಗಿ ಮಾರ್ಪಾಡಾಗಿದೆ.

ಹೆಚ್ಚಿನ ಸುದ್ದಿ