Tuesday, July 8, 2025
Homeಚುನಾವಣೆ 2023ಬಿಜೆಪಿಯೆಂಬ ತಾಯಿಯೇ ನನಗೆ ವಿಷವುಣಿಸಿದ್ದಾಳೆ: ಲಕ್ಷ್ಮಣ ಸವದಿ

ಬಿಜೆಪಿಯೆಂಬ ತಾಯಿಯೇ ನನಗೆ ವಿಷವುಣಿಸಿದ್ದಾಳೆ: ಲಕ್ಷ್ಮಣ ಸವದಿ

ಬೆಳಗಾವಿ: ಬಿಜೆಪಿಯ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ ಬೆನ್ನಲ್ಲೇ ಬಿಜೆಪಿಯ ಮೊದಲ ವಿಕೆಟ್‌ ಪತನವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಅಥಣಿ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಲಕ್ಷ್ಮಣ ಸವದಿ ಬಿಜೆಪಿಗೆ ವಿದಾಯ ಹೇಳುವ ಸಾಧ್ಯತೆ ಕಾಣುತ್ತಿದೆ

ಅಂದಿನ ಬಿಜೆಪಿಗೂ ಇಂದಿನ ಬಿಜೆಪಿಗೂ ತುಂಬಾ ವ್ಯತ್ಯಾಸವಿದೆ. ಹೊರಗಿನಿಂದ ಬಂದವರಿಂದ ಬಿಜೆಪಿ ಒಳಗೆ ಬಹಳಷ್ಟು ಬದಲಾವಣೆ ಆಗಿದೆ. ಬೇರೆ ಪಕ್ಷದಿಂದ ಬಂದವರಿಗೆ ಒಳಿತಾಗಲಿ ಎಂದು ಎಂದು ರಮೇಶ್‌ ಜಾರಕಿಹೊಳಿ ವಿರುದ್ಧ ಸಾತ್ವಿಕವಾಗಿಯೇ ಅಸಮಾಧಾನ ಹೊರಹಾಕಿದ್ರು.  

20 ವರ್ಷದ ಬಿಜೆಪಿಯೊಂದಿಗಿನ ಒಡನಾಟಕ್ಕೆ ವಿದಾಯ ಹೇಳಬೇಕು ಅಂದ್ರೆ ನನಗೂ ಕಷ್ಟ. ಆದ್ರೆ ನಾನು ನಂಬಿ ಬಂದ ಪಕ್ಷದ ನಾಯಕರು ನನಗೆ ದ್ರೋಹ ಮಾಡಿದ್ದಾರೆ. ನಾನು ಬಿಜೆಪಿ ಪಕ್ಷವನ್ನು ನನ್ನ ತಾಯಿ ಸಮಾನ ಎಂದು ತಿಳಿದಿದ್ದೆ. ತಾಯಿಯಾದವಳು ಎಂದಿಗೂ ಮಗನಿಗೆ ಕೇಡು ಬಯಸುವುದಿಲ್ಲ ಎಂದು ನಂಬಿದ್ದೆ. ಆದ್ರೆ ಬಿಜೆಪಿಯೆಂಬ ತಾಯಿಯೇ ನನಗಿಂದು ವಿಷವುಣಿಸಿದ್ದಾಳೆ ಎಂದು ಬೇಸರ ವ್ಯಕ್ತಪರಿಸಿದ್ರು.  ನಾಳೆ ಸಾಯಂಕಾಲ ಅಥಣಿಯ ಹಿರಿಯರು ಹಾಗೂ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ ನನ್ನ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ ಎಂದಿದ್ದಾರೆ. ನನ್ನ ಕ್ಷೇತ್ರದ ಜನರ ತೀರ್ಮಾನವೇ ನನ್ನ ಅಂತಿಮ ತೀರ್ಮಾನ ಎಂದಿದ್ದಾರೆ

ಹೆಚ್ಚಿನ ಸುದ್ದಿ