ದಾವಣಗೆರೆ: ಕೆಎಸ್‌ಡಿಎಲ್ ಲಂಚ ಪ್ರಕರಣದಲ್ಲಿ ಸೆರೆಮನೆ ವಾಸ ಅನುಭವಿಸಿ ಬಂದ ಮಾಡಾಳು ವಿರೂಪಾಕ್ಷಪ್ಪ ಪುತ್ರ ಮಾಡಾಳು ಪ್ರಶಾಂತ್ ಇನ್ನೂ ಜೈಲಿನಲ್ಲೇ ಇದ್ದಾರೆ. ಆದ್ರೆ ವಿರೂಪಾಕ್ಷಪ್ಪ ಇನ್ನೋರ್ವ ಪುತ್ರ ಮಾಡಾಳು ಮಲ್ಲಿಕಾರ್ಜುನ್ ಚುನಾವಣಾ ಕಣಕ್ಕಿಳಿಯಲು ಸಜ್ಜಾಗಿದ್ದಾರೆ
ಲಂಚ ಪ್ರಕರಣದಿಂದ ವಿರೂಪಾಕ್ಷಪ್ಪಗೆ ಟಿಕೆಟ್ ಸಿಗುವುದು ದೂರದ ಮಾತಾಗಿತ್ತು. ಆದರೆ ತಮಗಲ್ಲದಿದ್ರೆ ತಮ್ಮ ಮಗನಿಗಾದರೂ ಟಿಕೆಟ್ ನೀಡುವಂತೆ ವಿರೂಪಾಕ್ಷಪ್ಪ ಬಿಜೆಪಿಗೆ ಮನವಿ ಮಾಡಿದ್ದರು. ಆದರೆ ಎಚ್. ಎಸ್. ಶಿವಕುಮಾರ್‌ಗೆ ಬಿಜೆಪಿ ಅವಕಾಶ ನೀಡಿದೆ. ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ್ ಪಕ್ಷೇತರರಾಗಿ ಚನ್ನಗಿರಿ ಕ್ಷೇತ್ರದಿಂದಲೇ ಕಣಕ್ಕಿಳಿಯುವ ನಿರ್ಧಾರ ಮಾಡಿದ್ದಾರೆ.