Sunday, June 21, 2026
Homeದೇಶಎನ್ ಸಿಇಆರ್ ಟಿ ಪಠ್ಯಪುಸ್ತಕದಲ್ಲಿ ಮೌಲಾನಾ ಆಝಾದ್ ಹೆಸರಿಗೆ ಕತ್ತರಿ

ಎನ್ ಸಿಇಆರ್ ಟಿ ಪಠ್ಯಪುಸ್ತಕದಲ್ಲಿ ಮೌಲಾನಾ ಆಝಾದ್ ಹೆಸರಿಗೆ ಕತ್ತರಿ

ನವದೆಹಲಿ: ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಝಾದ್ ಅವರ ಕುರಿತ ವಿಷಯಗಳನ್ನು ಎನ್ ಸಿಇಆರ್ ಟಿಯ 11ನೆ ತರಗತಿಯ ರಾಜಕೀಯ ಶಾಸ್ತ್ರ ಪಠ್ಯದಿಂದ ತೆಗೆದು ಹಾಕಲಾಗಿದೆ.

ಇತ್ತೀಚೆಗಷ್ಟೇ ಮಹಾತ್ಮಾ ಗಾಂಧೀಜಿ ಅವರ ಹತ್ಯೆ ಮತ್ತು ನಾಥೂರಾಮ್ ಗೋಡ್ಸೆ ಹಿನ್ನೆಲೆಯ ಕುರಿತ ವಿಚಾರಗಳನ್ನು ತೆಗೆದುಹಾಕಿ ಎನ್ ಸಿಇಆರ್ ಟಿ ವಿವಾದ ಸೃಷ್ಟಿಸಿತ್ತು.

ರಾಜಕೀಯ ಶಾಸ್ತ್ರ ಪಠ್ಯದಲ್ಲಿ ‘ಸಂವಿಧಾನ-ಯಾಕೆ ಮತ್ತು ಹೇಗೆ’ ಎನ್ನುವ ಪಾಠದಲ್ಲಿ ಸಂವಿಧಾನದ ಅಸೆಂಬ್ಲಿ ಸಮಿತಿ ಸಭೆಗಳ ಕುರಿತ ವಾಕ್ಯಗಳಲ್ಲಿ ಮೌಲಾನಾ ಅಬುಲ್ ಕಲಾಂ ಆಝಾದ್ ಹೆಸರನ್ನ ಕೈಬಿಡಲಾಗಿದೆ.

ಈಗ ಬದಲಾದ ವಾಕ್ಯವು, “ಸಾಮಾನ್ಯವಾಗಿ ಈ ಸಮಿತಿ ಸಭೆಗಳಲ್ಲಿ ಜವಹರಲಾಲ್ ನೆಹರೂ, ರಾಜೇಂದ್ರ ಪ್ರಸಾದ್, ಸರ್ದಾರ್ ಪಟೇಲ್ ಮತ್ತು ಬಿ.ಆರ್. ಅಂಬೇಡ್ಕರ್ ಇರುತ್ತಿದ್ದರು” ಎಂದಿದೆ. ಇದರಲ್ಲಿದ್ದ ಮೌಲಾನಾ ಆಝಾದ್ ಹೆಸರನ್ನ ಕೈಬಿಡಲಾಗಿದೆ.

ಹೆಚ್ಚಿನ ಸುದ್ದಿ