Saturday, June 6, 2026
Homeಟಾಪ್ ನ್ಯೂಸ್ಫೆಮಿನಾ ಮಿಸ್ ಇಂಡಿಯಾ ಕಿರೀಟ ತೊಟ್ಟ ನಂದಿನಿ ಗುಪ್ತಾ

ಫೆಮಿನಾ ಮಿಸ್ ಇಂಡಿಯಾ ಕಿರೀಟ ತೊಟ್ಟ ನಂದಿನಿ ಗುಪ್ತಾ

ನವದೆಹಲಿ: ರಾಜಸ್ಥಾನದ ನಂದಿನಿ ಗುಪ್ತಾ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2023 ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಜತೆಗೆ ದೆಹಲಿಯ ಶ್ರೇಯಾ ಪೂಂಜಾ ಮೊದಲ ರನ್ನರ್ ಅಪ್ ಆಗಿದ್ದು, ಮಣಿಪುರದ ತೌನೊಜಮ್ ಸ್ಟ್ರೆಲಾ ಲುವಾಂಗ್ 2ನೇ ರನ್ನರ್ ಅಪ್ ಆಗಿದ್ದಾರೆ.

ಭಾರತದ ಅಗ್ರಗಣ್ಯ ಪ್ರತಿಷ್ಠಿತ ಸ್ಪರ್ಧೆ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2023ರ 59ನೇ ಆವೃತ್ತಿ ಮಣಿಪುರದ ಇಂಫಾಲ್‌ನ ಖುಮಾನ್ ಲಂಪಾಕ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಈ ಭಾರಿಯ ಮಿಸ್ ಇಂಡಿಯಾ ಪಟ್ಟವನ್ನು ರಾಜಸ್ಥಾನದ ನಂದಿನಿ ಗುಪ್ತಾ ಪಡೆದಿದ್ದಾರೆ. 19 ವರ್ಷದ ನಂದಿನಿ ರಾಜಸ್ಥಾನದ ಕೋಟಾದವರಾಗಿದ್ದು, ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ.

ಕಾರ್ಯಕ್ರಮದಲ್ಲಿ ಮಾಜಿ ವಿಜೇತ ಸಿನಿ ಶೆಟ್ಟಿ, ರುಬಲ್ ಶೇಖಾವತ್, ಶಿನಾತಾ ಚೌಹಾಣ್, ಮಾನಸಾ ವಾರಣಾಸಿ, ಮಣಿಕಾ ಶಿಯೋಕಂದ್, ಮಾನ್ಯ ಸಿಂಗ್, ಸುಮನ್ ರಾವ್ ಮತ್ತು ಶಿವಾನಿ ಜಾಧವ್ ಭಾಗಿಯಾಗಿದ್ದರು.

ಹೆಚ್ಚಿನ ಸುದ್ದಿ