Tuesday, April 14, 2026
Homeದೇಶಜಾತಿ ತಾರತಮ್ಯ, ಕಿರುಕುಳಕ್ಕೆ ಒಳಗಾಗಿದ್ದ ದರ್ಶನ್ ಸೋಲಂಕಿ: ಚಾಟ್ ಗಳಿಂದ ಬಹಿರಂಗ

ಜಾತಿ ತಾರತಮ್ಯ, ಕಿರುಕುಳಕ್ಕೆ ಒಳಗಾಗಿದ್ದ ದರ್ಶನ್ ಸೋಲಂಕಿ: ಚಾಟ್ ಗಳಿಂದ ಬಹಿರಂಗ

ನವದೆಹಲಿ: ಐಐಟಿ ಬಾಂಬೆಯ ವಿದ್ಯಾರ್ಥಿ ದರ್ಶನ್ ಸೋಲಂಕಿ ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ತಿರುವು ಲಭಿಸಿದೆ.

ಇನ್ ಸ್ಟಾಗ್ರಾಮ್ ಚಾಟ್ ಗಳನ್ನು ಪರಿಶೀಲಿಸಿದಾಗ ವಿದ್ಯಾರ್ಥಿ ದರ್ಶನ್ ಸೋಲಂಕಿ ಜಾತಿ ಆಧಾರಿತ ತಾರತಮ್ಯ ಮತ್ತು ಕಿರುಕುಳಕ್ಕೆ ಒಳಗಾಗಿದ್ದಾರೆ ಎನ್ನುವುದು ಬಯಲಾಗಿದೆ.

ಮುಂಬೈ ಪೊಲೀಸರು ರಚಿಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ) ಈ ವಿಚಾರ ಬಹಿರಂಗಪಡಿಸಿದ್ದು, ವಿದ್ಯಾರ್ಥಿಯ ಬ್ಯಾಚ್‌ಮೇಟ್ ಬೆದರಿಕೆ ಹಾಕಲು ಬಳಸಿದ್ದ ಕಟರ್ ಅನ್ನು ಅವರು ಪತ್ತೆ ಮಾಡಿದ್ದಾರೆ.

ದರ್ಶನ್ ಸೋಲಂಕಿ ಅವರ ತಂದೆ ರಮೇಶ್ ಸೋಲಂಕಿ ಅವರು ತಮ್ಮ ಮಗನ ಸಾವಿನ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಎಸ್‌ಐಟಿಗೆ ಪತ್ರ ಬರೆದಿದ್ದಾರೆ.

ಹೆಚ್ಚಿನ ಸುದ್ದಿ