ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಸಚಿವ ಆರ್ ಅಶೋಕ್ ರನ್ನು ಬಿಜೆಪಿ ಕಣಕ್ಕಿಳಿಸಿದೆ. ಒಕ್ಕಲಿಗ ಸಮುದಾಯದ ಮತದಾರರನ್ನು ಸೆಳೆಯಲು ಅಶೋಕ್‌ರನ್ನು ಕನಕಪುರದಲ್ಲಿ ಇಳಿಸಲಾಗಿದೆ. ಡಿಕೆ ಶಿವಕುಮಾರ್‌ಗೆ ಭರ್ಜರಿ ಪೈಪೋಟಿ ನೀಡಲು ಬಿಜೆಪಿ ಸಜ್ಜಾಗಿದ್ದು, ಕನಕಪುರದ ಜೊತೆ ಪದ್ಮನಾಭನಗರದಲ್ಲೂ ಅಶೋಕ್ ಸ್ಪರ್ಧಿಸಲಿದ್ದಾರೆ.
