ಬೆಳಗಾವಿ : ಸಮ್ಮಿಶ್ರ ಸರ್ಕಾರವನ್ನೇ ಕೆಡವಿ ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮೇಶ್ ಜಾರಕಿಹೊಳಿಗೆ ಬಿಜೆಪಿ ಮನ್ನಣೆ ನೀಡಿ ಬೆಳಗಾವಿ ಮಟ್ಟದಲ್ಲಿ ಮಿಂಚುವಂತೆ ಮಾಡಿದೆ.
ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದ ಕ್ಷೇತ್ರಗಳಿಗೆ ಅವರು ಸೂಚಿಸಿದ ಅಭ್ಯರ್ಥಿಗಳನ್ನೇ ಬಿಜೆಪಿ ಕಣಕ್ಕಿಳಿಸಿದೆ. ಅಥಣಿ ಕ್ಷೇತ್ರದಲ್ಲಿ ತಮ್ಮ ಜೊತೆ ಕಾಂಗ್ರೆಸ್ ತೊರೆದು ಬಂದ ಮಹೇಶ್ ಕುಮಟಳ್ಳಿ ಹಾಗೂ ತಮ್ಮ ಆಪ್ತ ನಾಗೇಶ್ ಮನ್ನೋಳ್ಕರ್‌ಗೆ ಟಿಕೆಟ್ ಕೊಡಿಸಲು ರಮೇಶ್ ಆರಕಿಹೊಳಿ ಇನ್ನಿಲ್ಲದ ಕಸರತ್ತು ಮಾಡಿ ಗೆದ್ದಿದ್ದಾರೆ.
ಈ ಮಧ್ಯೆ ಲಕ್ಷ್ಮಣ ಸವದಿ ಕೂಡಾ ಅಥಣಿ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಭಾರೀ ಸರ್ಕಸ್ ಮಾಡಿದ್ರು.. ಈ ವಿಚಾರವಾಗಿ ಸವದಿ ಹಾಗೂ ಜಾರಕಿಹೊಳಿ ನಡುವೆ ವಾಗ್ಯದ್ಧಗಳೇ ನಡೆದಿದ್ವು. ಆದರೆ ಇದೆಲ್ಲದರ ನಡುವ ರಮೇಶ್ ಜಾರಕಿಹೊಳಿ ಕೈ ಮೇಲಾಗಿದ್ದು ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಸಫಲರಾಗಿದ್ದಾರೆ.