ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸುವ ಬಾಕಿ ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷವು ಇನ್ನೆರಡು ದಿನಗಳಲ್ಲಿ ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.
ವಾತಾವರಣ ಬಿಜೆಪಿ ಪರವಾಗಿದೆ, ಒಂದೊಂದು ಕ್ಷೇತ್ರದಲ್ಲಿ ನಾಲ್ಕೈದು ಆಕಾಂಕ್ಷಿಗಳಿದ್ದಾಗ ಸಹಜವಾಗಿ ಒಬ್ಬರಿಗೆ ಟಿಕೆಟ್ ಸಿಗುತ್ತದೆ. ಉಳಿದವರು ನೋವು ಹಾಗೂ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಅಸಮಾಧಾನ ಇರುವವರು, ನೋವು ವ್ಯಕ್ತಪಡಿಸಿದರನ್ನು ಕರೆದು ಮಾತನಾಡುತ್ತೇವೆ ಎಂದು ಹೇಳಿದ್ದಾರೆ.
ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲದೆ ನೇರ ಹೋರಾಟ ಮಾಡಲಿದ್ದೇವೆ. ಎಲ್ಲ ಪ್ರಮುಖ ನಾಯಕರನ್ನು ಎದುರಿಸುತ್ತೇವೆ. ಕನಕಪುರ ಮತ್ತು ವರುಣಾದಲ್ಲಿ ಅಶೋಕ್ ಮತ್ತು ಸೋಮಣ್ಣರನ್ನು ಕಾಂಗ್ರೆಸ್ಸಿಗರು ಮೊದಲು ಎದುರಿಸಲಿ. ಬಳಿಕ ಬೇರೆಯವರ ಕುರಿತು ಯೋಚಿಸೋಣ ಎಂದು ಅವರು ಹೇಳಿದ್ದಾರೆ.
ಸುಮಾರು 20-22 ಜನರು ಈಗಾಗಲೇ ಬಿ ಫಾರಂ ಪಡೆದಿದ್ದಾರೆ. ಉಳಿದವರೆಲ್ಲರಿಗೂ ಶೀಘ್ರವೇ ಬಿ ಫಾರಂ ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ.