ಮುಂಬೈ: “ನಾನು ಬಿಜೆಪಿ ಸೇರದಿದ್ದರೆ ನನ್ನನ್ನು ಜೈಲಿಗೆ ಹಾಕುತ್ತಾರೆ” ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ತಮ್ಮ ಬಳಿ ಕಣ್ಣೀರು ಹಾಕಿದ್ದರು ಎಂದು ಶಾಸಕ ಆದಿತ್ಯ ಠಾಕ್ರೆ ಹೇಳಿದ್ದಾರೆ.
ಆದಿತ್ಯ ಠಾಕ್ರೆ ಹೇಳಿಕೆಗೆ ಸಹಮತ ವ್ಯಕ್ತಪಡಿಸಿರುವ ಶಿವಸೇನೆ ಸಂಸದ ಸಂಜಯ್ ರಾವತ್ ನಾನು ಕೂಡ ಏಕನಾಥ್ ಶಿಂಧೆಯನ್ನು ಮನವೊಲಿಸಲು ಯತ್ನಿಸಿದ್ದೆ. ಆದರೆ ಅವರು ಜೈಲು ಶಿಕ್ಷೆಗೆ ಹೆದರಿದ್ದರು. ಆದಿತ್ಯ ಹೇಳುತ್ತಿರುವುದು ಸತ್ಯ ಎಂದು ಹೇಳಿದ್ದಾರೆ.
“ಈ 40 ಶಾಸಕರು ಹಣ, ಅಧಿಕಾರ, ಸೀಟಿಗಾಗಿ ಹೋಗಿದ್ದಾರೆ ಹೊರತು ಬೇರೆ ಯಾವುದಕ್ಕೂ ಅಲ್ಲ. ಕೇಂದ್ರದ ತನಿಖಾ ಏಜೆನ್ಸಿಗಳು ನನ್ನನ್ನು ಬಂಧಿಸಬಹುದೆಂದು ಈಗಿನ ಮಹಾರಾಷ್ಟ್ರ ಸಿಎಂ ನಮ್ಮ ಮನೆಗೆ ಬಂದು ಕಣ್ಣೀರು ಹಾಕಿದ್ದರು” ಎಂದು ಆದಿತ್ಯ ಠಾಕ್ರೆ ಇವತ್ತು ಹೇಳಿಕೆ ನೀಡಿದ್ದರು.
