Monday, July 7, 2025
Homeಚುನಾವಣೆ 2023ಬೆಂಗಳೂರು ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ

ಬೆಂಗಳೂರು ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ

ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವುದಕ್ಕೂ ಮುನ್ನವೇ ಟಿಕೆಟ್ ವಂಚಿತರ ಅಸಮಾಧಾನದ ಕಾವು ಹೊಗೆಯಾಡತೊಡಗಿದ್ದು, ಟಿಕೆಟ್ ಬಿಡುಗಡೆ ಬಳಿಕ ನೇರವಾಗಿ ಬೆಂಕಿ ಬಿದ್ದಂತಾಗಿದೆ.
ಜಯನಗರ ಮತಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಎನ್ ಆರ್ ರಮೇಶ್ ಬೆಂಬಲಿಗರು ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಜಯನಗರದಲ್ಲಿ ಎನ್ ಆರ್ ರಮೇಶ್ ಗೆ ಟಿಕೆಟ್ ನೀಡದೇ ಸಿ.ಕೆ.ರಾಮಮೂರ್ತಿಯವರಿಗೆ ಅವಕಾಶ ನೀಡಿರುವುದು ಎನ್ ಆರ್ ರಮೇಶ್ ಬೆಂಬಲಿಗರನ್ನು ಕೆರಳಿಸಿದೆ. ಈ ಕುರಿತು ಬುಧವಾರ ತುರ್ತು ಪತ್ರಿಕಾಗೋಷ್ಠಿ ಆಯೋಜಿಸಿರುವ ಎನ್ ಆರ್ ರಮೇಶ್ ತಮ್ಮ ಮುಂದಿನ ರಾಜಕೀಯ ನಡೆಯನ್ನು ಘೋಷಿಸಲಿದ್ದಾರೆ.
ಈಗಾಗಲೇ ಶಿವಮೊಗ್ಗದಲ್ಲಿ ಈಶ್ವರಪ್ಪ , ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಬೆಂಬಲಿಗರ ಪ್ರತಿಭಟನೆಗೆ ಈಗ ಮತ್ತೆ ಹಲವು ಕ್ಷೇತ್ರಗಳು ಸೇರ್ಪಡೆಯಾಗತೊಡಗಿದೆ.

ಹೆಚ್ಚಿನ ಸುದ್ದಿ