ಹೊಸದಿಲ್ಲಿ: 2002ರಲ್ಲಿ ಗುಜರಾತ್ ಹತ್ಯಾಕಾಂಡದ ಸಂದರ್ಭ ನಡೆದ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗಳಿಗೆ ಕ್ಷಮಾಪಣೆ ನೀಡಿದ್ದ ಕಡತಗಳನ್ನು ಕೋರಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಕೇಂದ್ರ ಸರ್ಕಾರ, ಗುಜರಾತ್ ಸರ್ಕಾರ ಪ್ರಶ್ನಿಸುವ ಸಾಧ್ಯತೆಯಿದೆ.
ಇನ್ನು ಅಪರಾಧಿಗಳ ಬಿಡುಗಡೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.
“ಗರ್ಭಿಣಿ ಮಹಿಳೆಯ ಸಾಮೂಹಿಕ ಅತ್ಯಾಚಾರಗೈಯಲಾಯಿತು, ಹಲವು ಜನರನ್ನು ಕೊಲ್ಲಲಾಯಿತು. ಪ್ರಕರಣವನ್ನು ಸೆಕ್ಷನ್ 302 (ಕೊಲೆ) ಪ್ರಕರಣದಂತೆ ಹೋಲಿಸಲು ಸಾಧ್ಯವಿಲ್ಲ. ಸೇಬನ್ನು ಕಿತ್ತಳೆಯೊಂದಿಗೆ ಹೋಲಿಸಲು ಸಾಧ್ಯವಿಲ್ಲ. ಅದೇ ರೀತಿ ಹತ್ಯಾಕಾಂಡವನ್ನು ಒಂದೇ ಕೊಲೆಯೊಂದಿಗೆ ಹೋಲಿಸಲು ಸಾಧ್ಯವಿಲ್ಲ” ಎಂದು ನ್ಯಾಯಪೀಠ ಹೇಳಿದೆ.
“ಇಂದು ಬಿಲ್ಕಿಸ್ , ನಾಳೆ ಯಾರೂ ಆಗಿರಬಹುದು. ಅದು ನೀವು ಅಥವಾ ನಾನೂ ಆಗಿರಬಹುದು” ಎಂದು ಕೋರ್ಟ್ ಹೇಳಿದೆ.